ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ಹಾಗೂ ನಿರ್ವಾಹಕರ ಮೇಲೆ ಹಲ್ಲೆ ಪ್ರಕರಣಗಳ ಸಂಖ್ಯೆ ಹೆಚ್ಚುತಲೆ ಇವೆ. ಇದೀಗ ಸರಿಯಾದ ಸಮಯಕ್ಕೆ ಬಸ್ ಬರುತ್ತಿಲ್ಲವೆಂದು ಪುಂಡಾಟಿಕೆ ಮೆರಿದ ವ್ಯಕ್ತಿ ಒಬ್ಬ ಬಸ್ ಚಾಲಕನ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ ನಡೆಸಿರುವ ಘಟನೆ ನೆಲಮಂಗಲ ತಾಲೂಕಿನ ಮಹಿಮಾಪುರ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹಿಮಾಪುರ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ವ್ಯಕ್ತಿ ಪುಂಡಾಟಿಕೆ ನಡೆಸಿದ್ದಾನೆ. ಬಿಯರ್ ಬಾಟಲ್ ನಿಂದ ಬಸ್ ಚಾಲಕನ ಕೈಗೆ ಪುಂಡ ಹೊಡೆದಿದ್ದಾನೆ. ಚಾಲಕನ ಮೇಲೆ ಹಲ್ಲೆ ನಡೆಸಿದ ಬಳಿಕ ಬಸ್ಸಿನ ಮಿರರ್ ಒಡೆದು ಪುಂಡ ಅಲ್ಲಿಂದ ಪರಾರಿಯಾಗಿದ್ದಾನೆ.
ಸರಿಯಾದ ಸಮಯಕ್ಕೆ ನೀವು ಯಾಕೆ ಬರುತ್ತಿಲ್ಲ ಅಂತ ಗಲಾಟೆ ಮಾಡಿದ್ದಾನೆ. ಬೈಕ್ ನಲ್ಲಿ ಬಂದಿದ್ದ 40 ವರ್ಷದ ದುಷ್ಕರ್ಮಿಯಿಂದ ಈ ಒಂದು ಕೃತ್ಯ ನಡೆದಿದೆ. KA 52 Q 6697 ಸಂಖ್ಯೆಯ ಬೈಕ್ ನಿಂದ ಕಿಡಿಗೇಡಿ ಆಗಮಿಸಿ ಈ ಕೃತ್ಯ ಎಸಗಿದ್ದಾನೆ. ದುಷ್ಕರ್ಮಿಗಾಗಿ ನೆಲಮಂಗಲ ಗ್ರಾಮೀಣ ಪೊಲೀಸರಿಂದ ಹುಡುಕಾಟ ಆರಂಭವಾಗಿದೆ. ಘಟನೆ ಕುರಿತಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.