ಬೆಂಗಳೂರು : ಬೆಂಗಳೂರಿನಲ್ಲಿ ಟಿಕೆಟ್ ಕೊಡುತ್ತಲೇ, ಯುವತಿನ್ನು, ತನ್ನ ಬಲೆಗೆ ಬೀಳಿಸಿಕೊಂಡ ಕಂಡಕ್ಟರ್ ತನಗೆ ಈ ಮುಂಚೆ ಮದುವೆ ಆಗಿರುವುದನ್ನು ಮುಚ್ಚಿಟ್ಟು ಯುವತಿ ಜೊತೆಗೆ ಸುತ್ತಾಡಿ ತಿರುಗಾಡಿ ಮಜಾ ಮಾಡಿದ್ದಾನೆ. ಬಳಿಕ ಆತನಿಗೆ ಮದುವೆಯಾಗಿದೆ ಎಂದು ಯುವತಿಗೆ ತಿಳಿದಿದ್ದೆ ತಡ ನನಗೆ ಯುವತಿ ಬೇಡ ಎಂದು ಕಂಡಕ್ಟರ್ ತಿಳಿಸಿದ್ದಾನೆ.
ಹೌದು ಟಿಕೆಟ್ ಕೊಡುತ್ತಲೇ ಯುವತಿಯನ್ನು ಕಂಡಕ್ಟರ್ ಪಟಾಯಿಸಿದ್ದು, ಮದುವೆಯಾದ ಮೂರೇ ತಿಂಗಳಿಗೆ ಕಂಡಕ್ಟರ್‌ನ ಮುಖ ಬಯಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಂ.ಎಸ್.ಪಾಳ್ಯ ಬಿಎಂಟಿಸಿ ಡಿಪೋ ಕಂಡಕ್ಟರ್ ಕಮ್ ಡ್ರೈವರ್ ಆಗಿ ಮಂಜುನಾಥ್ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಎಂ.ಎಸ್.ಪಾಳ್ಯ ಟು ಯಲಹಂಕ ಬಿಎಂಟಿಸಿ ಬಸ್‌ನಲ್ಲಿ ಯುವತಿ ಪ್ರಯಾಣಿಸುತ್ತಿದ್ದಳು.
ಈ ವೇಳೆ ಟಿಕೆಟ್ ಕೊಡುತ್ತಲೇ ಯುವತಿಯನ್ನು ಪರಿಚಯ ಮಾಡ್ಕೊಂಡು ಮಂಜುನಾಥ್ ನಂಬರ್ ಪಡೆದಿದ್ದ. ಕಂಡಕ್ಟರ್ ತನಗೆ ಮದುವೆಯಾಗಿ, ಇಬ್ಬರು ಮಕ್ಕಳಿರುವುದನ್ನು ಮುಚ್ಚಿಟ್ಟು ಯುವತಿಯನ್ನ ಪ್ರೀತಿಸುವುದಾಗಿ ಹೇಳಿದ್ದ. ಈ ವೇಳೆ ಯುವತಿ ಕೂಡ ತನಗೆ ಮದುವೆಯಾಗಿ ಡಿವೋರ್ಸ್ ಆಗಿತ್ತು ಎಂದು ತಿಳಿಸಿದ್ದಳು.
ಈ ವೇಳೆ ನಿನಗೆ ಬಾಳು ಕೊಡುತ್ತೇನೆ ನೀನು ನನಗೆ ಇಷ್ಟ ಎಂದು ಯುವತಿಯ ಹಿಂದೆ ಬಿದ್ದಂತಹ ಕಂಡಕ್ಟರ್ ಆಕೆ ಜೊತೆ ತಿರುಗಾಡಿ ಎಂಜಾಯ್ ಮಾಡಿದ್ದಾನೆ. ಬಳಿಕ ಮನೆಯವರ ವಿರುದ್ಧ ನಡುವೆ ಯುವತಿ ಕಂಡಕ್ಟರ್ ನನ್ನು ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ. ತದನಂತರ ಮೂರು ತಿಂಗಳ ಬಳಿಕ ಕಂಡಕ್ಟರ್ ಗೆ ನೆಲಮಂಗಲದ ಬಳಿ ಆತನ ಇನ್ನೊಂದು ಕುಟುಂಬ ಇರುವುದು ತಿಳಿದು ಯುವತಿ ಕಂಗಲಾಗಿದ್ದಾಳೆ.
ಇನ್ನೂ ಕುಟುಂಬ ಇರುವ ವಿಚಾರ ಗೊತ್ತಾಗುವ ವೇಳೆ ಯುವತಿ ಗರ್ಭಿಣಿಯಾಗಿದ್ದಾರೆ. ಇತ್ತ ಕಂಡಕ್ಟರ್, ನನಗೆ ಯುವತಿ ಬೇಡ ಎಂದು ಹೇಳುತ್ತಿದ್ದಾನೆ.ಸದ್ಯ ಯುವತಿ ಬೆಂಗಳೂರು ಪೊಲೀಸ್ ಕಮಿಷನರ್, ಈಶಾನ್ಯ ಡಿಸಿಪಿ, ಮಹಿಳಾ ಸಹಾಯವಾಣಿಯಲ್ಲಿ ನ್ಯಾಯ ಕೊಡಿಸುವಂತೆ ದೂರು ದಾಖಲಿಸಿದ್ದು, ನನ್ನ ಗಂಡ ಬೇಕು, ಹೊಟ್ಟೆಯಲ್ಲಿರುವ ನನ್ನ ಮಗುವಿಗೆ ತಂದೆ ಬೇಕು ಎಂದು ಹಠ ಹಿಡಿದಿದ್ದಾಳೆ.