ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತ ಸುಜಾತ ಹಂಡಿ ಅವರನ್ನು ವಿಬಸ್ತ್ರಗೊಳಿಸಿ ಪೊಲೀಸರು ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ, ಈ ಹಿಂದೆ ಸುಜಾತ ಹಂಡಿ ಮಾಡಿದ ಕ್ರೌರ್ಯ ವಿಡಿಯೋಗಳು ವೈರಲಾಗಿವೆ. ಈಗ ಪೊಲೀಸರು ಸುಜಾತ ಹಂಡಿ ಕುಟುಂಬಸ್ಥರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.
ಹೌದು ಸುಜಾತ ಹಂಡಿ ಕುಟುಂಬಸ್ಥರಿಗೆ ಪೊಲೀಸರು ನೋಟಿಸ್ ನೀಡಿದ್ದು ಸಹೋದರ ಮರಿಯಾದಾಸ್ ಕಮಲಮ್ಮ ಗೆ ನೋಟಿಸ್ ನೀಡಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರ ಠಾಣೆ ಪೋಲಿಸರು ನೋಟಿಸ್ ನೀಡಿದ್ದಾರೆ. ಪೊಲೀಸರು ಸುಜಾತ ಹಂಡಿ ಕುಟುಂಬಸ್ಥರಿಂದ ಸಹಿ ಪಡೆದುಕೊಂಡಿದ್ದಾರೆ.
ಜನವರಿ 2ರಂದು ಪ್ರಶಾಂತ್ ನೀಡಿದ್ದ ದೂರಿನ ಆಧಾರದ ಮೇಲೆ ಸುಜಾತ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲಾಗಿತ್ತು. ಇದೇ ಪ್ರಕರಣದಲ್ಲಿ ಸುಜಾತ ಹಂಡಿ ಬಂಧನವಾಗಿದ್ದು ಇನ್ನುಳಿದವರಿಗೆ ಕೇಶವಪುರ ಠಾಣೆ ಪೊಲೀಸರು ನೋಟಿಸ್ ನೀಡಿದ್ದು, ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದ್ದಾರೆ.








