ನವದೆಹಲಿ: ಭಾರತ್ ಜೋಡೋ ನ್ಯಾಯ್ ಯಾತ್ರೆ ಬುಧವಾರ ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರ ಮೇಲೆ ಕೆಲವು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರಾಹುಲ್ ಗಾಂಧಿ ಕಾರಿನ ಮೇಲೆ ದಾಳಿ ಹಿಂದಿನಿಂದ ಅವರ ಕಾರಿನ ಮೇಲೆ ಕಲ್ಲು ಎಸೆಯಲಾಗಿದ್ದು, ವಾಹನದ ಗಾಜು ಒಡೆದಿದೆ. ರಾಹುಲ್ ಗಾಂಧಿ ಅವರೊಂದಿಗೆ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಕೂಡ ಇದ್ದರು.
ದಾಳಿಯಲ್ಲಿ ರಾಹುಲ್ ಗಾಂಧಿಗೆ ಯಾವುದೇ ಗಾಯಗಳಾಗಿಲ್ಲವಾದರೂ, ಕಲ್ಲು ಎಸೆದ ರೀತಿ ನೇರವಾಗಿ ಅವರ ತಲೆಗೆ ಹೊಡೆಯುತ್ತಿತ್ತು ಎಂದು ಅವರು ಹೇಳಿದರು. ರಾಹುಲ್ ಗಾಂಧಿಯನ್ನು ತಡೆಯಲು ಪ್ರಯತ್ನಗಳು ನಡೆಯುತ್ತಿವೆ, ಆದರೆ ಈ ರೀತಿ ದಾಳಿ ಮಾಡುವುದು ಸರಿಯಲ್ಲ. ಇಂತಹ ದಾಳಿಗಳನ್ನ ಸಹಿಸುವುದಿಲ್ಲ. ವಿರೋಧಿಗಳು ತಮ್ಮ ಮಿತಿಯೊಳಗೆ ಇರಬೇಕು ಎಂದು ಎಚ್ಚರಿಸಿದರು.
STORY | Rahul Gandhi's car 'pelted with stones' during Congress yatra in Bengal: Adhir Ranjan Chowdhury
READ: https://t.co/1gEDXZJJPY
VIDEO: pic.twitter.com/Mi44AqNeBq
— Press Trust of India (@PTI_News) January 31, 2024
BREAKING: ಬಿಹಾರದಲ್ಲಿ ‘ರಾಹುಲ್ ಗಾಂಧಿ’ ಕಾರಿನ ಮೇಲೆ ಕಲ್ಲು ತೂರಾಟ: ‘ಕಾರಿನ ಗ್ಲಾಸ್’ ಪುಡಿಪುಡಿ
ಚೀನಿ ಸೈನಿಕರ ವಿರುದ್ಧ ತೊಡೆ ತಟ್ಟಿ ನಿಂತ ‘ಲಡಾಖ್ ಕುರಿಗಾಹಿಗಳು’ : ಹೃದಯ ಗೆದ್ದ ವೈರಲ್ ವಿಡಿಯೋ ಇಲ್ಲಿದೆ