ಬೆಂಗಳೂರು: ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಲಿಫ್ಟ್ ಕೈಕೊಟ್ಟ ಕಾರಣ ಬಿಜೆಪಿ ಸಂಸದ ಸೇರಿದಂತೆ ಮೂವರು ಸಿಲುಕಿಕೊಂಡ ಘಟನೆ ನಡೆದಿದೆ.
ವಿದ್ಯುತ್ ಚಕ್ತಿ ಹೋದ ಸಮಯದಲ್ಲಿ ಜನರೇಟರ್ ಸರಿಯಾಗಿ ಆನ್ ಆಗದ ಹಿನ್ನಲೆಯಲ್ಲಿ ಲಿಫ್ಟ್ ಕೈಕೊಟ್ಟಿದ್ದಾರೆ ಎನ್ನಲಾಗಿದೆ. ತಮ್ಮ ಬೆಂಬಲಿಗರ ಜೊತೆಗೆ ಉಮೇಶ್ ಜಾಧವ್ ಅವರು ಲಿಫ್ಟ್ ಒಳಗೆ ಹೋಗಿದ್ದಾರೆ ಈ ವೇಳೆ ವಿದ್ಯುತ್ ಕೈಕೊಟ್ಟಿದೆ. ಕೂಡಲೇ ಲಿಫ್ಟ್ ಆಪರೇಟರ್ಗಳನ್ನು ಕರೆಸಿದರು, ನಂತರ ತಾಂತ್ರಿಕ ವರ್ಗದವರು ಕಾರ್ಯಚರಣೆ ನಡೆಸಿ ಲಿಫ್ಟ್ ಒಳಗೆ ಸಿಲುಕಿಕೊಂಡವರನ್ನು ಹೊರಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.