ಬೆಳಗಾವಿ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕುರಿತಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ನಿನ್ನೆ ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ FIR ದಾಖಲಾಗಿತ್ತು. ಇಂದು ಪೊಲೀಸರು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಕರೆತಂದು ಸಿಟಿ ರವಿ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಈ ವೇಳೆ ಸಿಟಿ ರವಿ ಪರವಾಗಿ ವಕೀಲ ಎಂಬಿ ಜಿರಲಿ ಅವರು ವಾದಿಸಿದರು. ವಾದ ಆಲಿಸಿದ ಬಳಿಕ ಜಡ್ಜ್ ಸಿಟಿ ರವಿ ಅವರ ಜಾಮೀನು ಆದೇಶವನ್ನು ಕಾಯ್ದಿರಿಸಿ ಆದೇಶ ಹೊರಡಿಸಿ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.
ಈ ವೇಳೆ ನ್ಯಾಯಾಧೀಶರು ವಿಚಾರಣೆಯನ್ನು ಆರಂಭಿಸಿದರು. ಬೆಳಗಾವಿಯ ಜೆಎಂಎಫ್ ಸಿ ಕೋರ್ಟಲ್ಲಿ ವಿಚಾರಣೆ ಆರಂಭವಾದಾಗ ಜಡ್ಜ್ ಗೆ ಕೈಮುಗಿದು ನಿಂತಾಗ ನ್ಯಾಯಾಧೀಶೆ ನಿಮ್ಮ ವಯಸ್ಸು ಎಷ್ಟು ಎಂದು ಕೇಳಿದರು. ಈ ವೇಳೆ ಸಿಟಿ ರವಿ ಅವರು 58 ವರ್ಷ ಎಂದು ತಿಳಿಸಿದರು. ಈ ವೇಳೆ ಸಿಟಿ ರವಿ ಪರ ವಕೀಲ ಎಂಬಿ ಜಿರಲಿ ವಾದ ಆರಂಭಿಸಿದರು.
ಸಿಟಿ ರವಿಯವರು ಸಾಮಾನ್ಯ ವ್ಯಕ್ತಿಯು ಅಲ್ಲ ರೌಡಿಯು ಅಲ್ಲ. ಸೆಕ್ಷನ್ 480 ಓದಿ ಹೇಳುತ್ತಿರುವ ಸಿಟಿ ರವಿಪರ ವಕೀಲರು ಮಾಡಿದರು. ಸೆಕ್ಷನ್ 41ರ ಅಡಿ ಬಂಧನ ಮಾಡಿದ್ದು, ಸಿಟಿ ರವಿ ಅವರದ್ದು ವಿಶೇಷ ಪ್ರಕರಣವಾಗಿದೆ. ಘಟನೆ ನಡೆದ ಸ್ಥಳ ಅತ್ಯಂತ ಶಿಷ್ಟಾಚಾರದ ಸ್ಥಳವಾಗಿದ್ದು ಅದು ಸಾಮಾನ್ಯ ಜಾಗದಲ್ಲಿ ಅಲ್ಲ. ಅಲ್ಲಿ ಪ್ರತಿಯೊಂದು ಕೂಡ ದಾಖಲಾಗಿರುತ್ತದೆ.ಪೊಲೀಸರೇ ಘಟನೆ ವಿಧಾನಸೌಧದಲ್ಲಿ ನಡೆದಿದೆ ಎಂದಿದ್ದಾರೆ.ಪೊಲೀಸರು ರವಿ ಅವರನ್ನು ಪಶುವಿನಂತೆ ಹೊತ್ತೊಯ್ದಿದ್ದಾರೆ. ರಾತ್ರಿ ಹಲವು ಕಡೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಆರ್ಟಿಕಲ್ 21ರ ಪ್ರಕಾರ ಸಿಗುವ ಸ್ವಾತಂತ್ರ್ಯ ಹತ್ತಿಕಲಾಗಿದೆ ರವಿ ಅವರಿಗೆ ಕಿರುಕುಳ ಕೊಡಲಾಗಿದೆ ಎಂದು ಎಂ.ಬಿ ಜಿರಲಿ ವಾದ ಮಂಡಿಸಿದರು.
ಪೊಲೀಸರು ಮನಬಂದಂತೆ ಮಾಡಬಹುದಾ? ರವಿ ಈಸ್ ಅಂಡರ್ ಪ್ರೆಶರ್. ಹೀಗಾಗಿ ನಾನು ಸಿಟಿ ರವಿ ಅವರಿಗೆ ಜಾಮೀನು ನೀಡಲು ಮನವಿ ಮಾಡುತ್ತೇನೆ. ಸಿಟಿ ರವಿ ಒತ್ತಡದಲ್ಲಿ ಇದ್ದರೂ. ಬೆಳಗ್ಗೆ ನೋಡಿದಾಗ ನಡುಗುತ್ತಿದ್ದರು. ಆರೋಪ ಸಾಬೀತ ಆಗುವ ಮುನ್ನ ಪೊಲೀಸರು ಹೀಗೆ ವರ್ತಿಸಿದ್ದಾರೆ 302ರ ಅಡಿಯ ಅಪರಾಧಿಗೂ ಕೂಡ ಈ ರೀತಿ ಟ್ರೀಟ್ ಮಾಡುವುದಿಲ್ಲ. ಹಾಗಾಗಿ ಸಿಟಿ ರವಿ ಅವರಿಗೆ ಜಾಮೀನು ನೀಡಬೇಕು ಎಂದು ಮನವಿ ಎಂ.ಬಿ ಜಿರಲಿ ಮನವಿ ಮಾಡಿದರು.
ಈ ವೇಳೆ ಸಿಟಿ ರವಿ ಅವರಿಗೆ ನಿಮ್ಮನ್ನು ಅರೆಸ್ಟ್ ಎಲ್ಲಿ ಮಾಡಿದ್ದಾರೆ ಎಂದು ಜಡ್ಜ್ ಕೇಳಿದರು. ನಿನ್ನೆ ಸಂಜೆ 6:30 ಸುಮಾರಿಗೆ ಸುವರ್ಣ ಸೌಧದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ರಾತ್ರಿ ಇಡೀ 10 ಗಂಟೆಗಳ ಕಾಲ ಮೂರು ಜಿಲ್ಲೆಗಳನ್ನು ಸುತ್ತಿಸಿದ್ದಾರೆ ಎಂದು ಸಿಟಿ ರವಿಯವರು ಜಡ್ಜ್ ಗೆ ಉತ್ತರಿಸಿದರು. ಇಲ್ಲಿ ಬರೋವರೆಗೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗ್ತಾ ಇದ್ರು. ಕ್ರಷರ್ ಕಬ್ಬಿನ ಗದ್ದೆಗೆ ಎಲ್ಲ ಪೊಲೀಸರು ಕರೆದುಕೊಂಡು ಹೋಗಿದ್ದರು ಎಂದು ಉತ್ತರಿಸಿದರು.
ಖಾನಾಪುರದಲ್ಲಿ ನನಗೆ ಹೊಡೆದರು. ತಲೆಯಲ್ಲಿ ನನಗೆ ರಕ್ತ ಸಹ ಬರುತ್ತಿತ್ತು ಎಂದು ನ್ಯಾಯಾಧೀಶರ ಬಳಿ ಪೊಲೀಸರ ವಿರುದ್ಧ ಆರೋಪ ಮಾಡಿದರು. ಈ ವೇಳೆ ಯಾರು ಹೊಡೆದರು ಎಂದು ಜಡ್ಜ್ ಕೇಳಿದಾಗ ಯಾರು ಹೊಡೆದರು ಅಂತ ಗೊತ್ತಿಲ್ಲ. ಆದರೆ ಪೊಲೀಸರೇ ಹೊಡೆದಿರಬಹುದು ಎಂದು ಸಿಟಿ ರವಿ ಅವರು ನ್ಯಾಯಾಧೀಶರ ಪ್ರಶ್ನೆಗೆ ಉತ್ತರಿಸಿದರು.
ನನಗೆ ಮಾನಸಿಕ ದೈಹಿಕ ಹಿಂಸೆ ಕೊಟ್ಟಿದ್ದು ಅಲ್ಲದೆ ಫೋನ್ ಕಿತ್ತುಕೊಳ್ಳೋಕೆ ಬರ್ತಾ ಇದ್ದರು ನನ್ನ ವಾಚ್ ಅಲ್ಲಿ ನಾನು ಮಾತನಾಡುತ್ತಿದ್ದೆ ಅದನ್ನು ಕಿತ್ತುಕೊಳ್ಳುವ ಪ್ರಯತ್ನ ಕೂಡ ಮಾಡಿದರು. ಪ್ರತಿ 10 ನಿಮಿಷಕ್ಕೆ ಯಾರದ್ದು ಕಾಲ್ ಬರುತ್ತಾ ಇತ್ತು ಅವರ ಸೂಚನೆಯಂತೆ ಪೊಲೀಸರು ವರ್ತಿಸುತ್ತಾ ಇದ್ದರು. ಯಾವ ಕಾರಣಕ್ಕಾಗಿ ಅರೆಸ್ಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿಲ್ಲ. ನಾನು ಕೂಡ ಕೇಳಿದೆ ಆದರೆ ಪೊಲೀಸರು ಯಾಕೆ ಅರೆಸ್ಟ್ ಮಾಡಿದ್ದಾರೆ ಎಂದು ತಿಳಿಸಿಲ್ಲ.
ಪೊಲೀಸರು ಅವರ ವಾಚ್ ಕಿತ್ತುಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದು ಸಿಟಿ ರವಿ ವಕೀಲ ಎಂ.ಬಿ ಜಿರಲಿ ವಾದ ಮಂಡಿಸಿದರು. ಈ ವೇಳೆ ಸಿಟಿ ರವಿ ಹೇಳಿಕೆಯನ್ನು ನ್ಯಾಯಾಲಯವು ದಾಖಲಿಸಿಕೊಳ್ಳುತ್ತಿದೆ. ನನ್ನ ಮೇಲೆ ನಿನ್ನೆ ಮೂರು ಬಾರಿ ಅಟ್ಯಾಕ್ ಆಯ್ತು. ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ನನ್ನ ಮೇಲೆ ದೈಹಿಕ ದಾಳಿ ಆಯಿತು ನಾನು ದೂರು ಕೊಟ್ಟರೂ ಸಹ ಪೊಲೀಸರು ದೂರನ್ನು ಸ್ವೀಕರಿಸಲಿಲ್ಲ. FIR ದಾಖಲಿಸಬೇಕು ಎಂದು ಹೇಳಿದರು ಪೊಲೀಸರು ಯಾವ ಆಸಕ್ತಿ ತೋರಿಸಲಿಲ್ಲ ಎಂದು ನ್ಯಾಯಾಧೀಶರ ಮುಂದೆ ಸೀಟಿ ರವಿಯವರು ಗಂಭೀರ ಆರೋಪ ಮಾಡಿದರು.
ವಕೀಲರನ್ನು ಒಳಗೊಡಲು ಕೂಡ ಎರಡು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಖಾನಾಪುರ ಠಾಣೆಗೆ ನಮ್ಮ ವಕೀಲರನ್ನು ಒಳ ಬಿಡಲು ಪೊಲೀಸರು ವಿಳಂಬ ಮಾಡಿದರು. ವಿರೋಧ ಪಕ್ಷದ ನಾಯಕರು ಬಂದರು ಕೂಡ ಪೊಲೀಸ್ ಠಾಣೆಯ ಒಳಗಡೆ ಬಿಡಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಎನ್ ರವಿಕುಮಾರ್ ಕೂಡ ಬಂದಿದ್ದರು ಎಂದು ಸಿಟಿ ರವಿ ಜಡ್ಜ್ ಗೆ ತಿಳಿಸಿದರು.
ಮಧ್ಯಾಹ್ನ ವಿಧಾನಸಭಾ ಕಾರಿಡಾರ್ ನಲ್ಲಿ ಮಂತ್ರಿಯೊಬ್ಬರು ಧಮ್ಕಿ ಹಾಕಿದರು. ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಧಮ್ಕಿ ಹಾಕಿದರು. ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಡಿಕೆ ಶಿವಕುಮಾರ್ ನಿನ್ನ ನೋಡ್ಕೋತೀನಿ ಅಂತ ಹೇಳಿದರು. ನಿಮ್ಮನ್ನ ನೋಡ್ಕೋತೀನಿ ಅಂತ ಕೌನ್ಸಿಲ್ ಒಳಗೆ ಡಿಸಿಎಂ ಡಿಕೆ ಶಿವಕುಮಾರ್ ನನಗೆ ಹೇಳಿದ್ದಾರೆ. ಎಂದು ಜಡ್ಜ್ ಮುಂದೆ ಸಿಟಿ ರವಿ ಗಂಭೀರವಾದ ಆರೋಪ ಮಾಡಿದರು.ಈ ವೇಳೆ ಸಿಟಿ ರವಿ ಪರ ವಕೀಲ ಎಂ ಬಿ ಜಿರಲಿ ಅವರು ಜಾಮೀನು ಅರ್ಜಿ ಸಲ್ಲಿಸಿ ವಾದಕ್ಕೆ ಕಾಲಾವಕಾಶ ನೀಡುವಂತೆ ನ್ಯಾಯಾಧೀಶರಿಗೆ ಮನವಿ ಮಾಡಿದರು.