ಬೆಳಗಾವಿ : ಇಂದು ಬೆಳಗಾವಿಯ ಸದನದಲ್ಲಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅವರು ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ಎಂಎಲ್ಸಿ ಸಿಟಿ ರವಿ ವಿರುದ್ಧ ದೂರು ಸಲ್ಲಿಸಿದ್ದು ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಇದೀಗ ಬಿಜೆಪಿ MLC ಸಿಟಿ ರವಿ ಅವರನ್ನು ಹಿರೇಬಾಗೇವಾಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಕುರಿತಂತೆ ಹಿರೇಬಾಗೇವಾಡಿ ಠಾಣೆಯಲ್ಲಿ BNS ಕಾಯ್ದೆ 75 ಮತ್ತು 79ರ ಅಡಿ ಕಾಯ್ದೆ, ಲೈಂಗಿಕ ಕಿರುಕುಳ, ಮಹಿಳಾ ಇಚ್ಛೆ ವಿರುದ್ಧ, ಅಶ್ಲೀಲತೆ ತೋರುವುದು, ಲೈಂಗಿಕ ಬಣ್ಣದ ಬಗ್ಗೆ ಟೀಕೆ ಹಾಗೂ ಮಹಿಳೆಯ ನಮ್ರತೆ, ಅವಮಾನಿಸುವ ಉದ್ದೇಶದಿಂದ ಸನ್ನೆ ಪದ ಅಥವಾ ಕ್ರಿಯೆ ಸೆಕ್ಷನ್ 75 ಲೈಂಗಿಕ ಕಿರುಕುಳ ನೀಡಿದ ಆರೋಪ ಸೆಕ್ಷನ್ 79 ಅವಮಾನಿಸುವ ಉದ್ದೇಶದಿಂದ ಸನ್ನೆ ಪದ ಕ್ರಿಯೆ ಸೇರಿದಂತೆ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಸಿ ಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೀಗ ಸಿಟಿ ರವಿ ಅವರನ್ನು ಹಿರಿಯ ಬಾಗೇವಾಡಿ ಪೊಲೀಸರು ವಶಕ್ಕೆ ಪಡೆದುಕೊಂಡು ಅರೆಸ್ಟ್ ಮಾಡಿದ್ದಾರೆ.