ಉಡುಪಿ : ರಾಜ್ಯದಲ್ಲಿ ದಿನವೊಂದಕ್ಕೆ ಹಗರಣಗಳು ಬಯಲಾಗುತ್ತಲೆ ಇವೆ. ಇಷ್ಟು ದಿನ ವಾಲ್ಮೀಕಿ, ಮುಡಾ ಆಯ್ತು, ಇದೀಗ ಬಿಜೆಪಿಯ ಸರದಿ. ಉಡುಪಿಯಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಬ್ಲಾಕ್ ಮನಿ ವೈಟ್ ಮಾಡುವ ಸಲುವಾಗಿ ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ಹಣ ಸಾಲದ ರೂಪದಲ್ಲಿ ನೀಡಿ ಬಡ್ಡಿಗೂ ಮೀರಿ ಹಣ ವಸೂಲಿ ಮಾಡಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಉಡುಪಿಯ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದ್ದು, ಉಡುಪಿಯ ಮಹಾಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯಿಂದ ವಂಚನೆ ಎಸಿಗಿರುವ ಆರೋಪ ಕೇಳಿ ಬಂದಿದೆ. ಬ್ಲಾಕ್ ಮನಿಯನ್ನು ವೈಟ್ ಮಾಡಲು ಸಾಲ ನೀಡಿದ ಆರೋಪ ಕೇಳಿ ಬಂದಿದೆ.
ಉಡುಪಿಯಲ್ಲಿ ಬ್ಲಾಕ್ ಟು ವೈಟ್ ಲೋನ್ ದೋಖಾ ಕೋಟಿಗಟ್ಟಲೆ ಹಣ ಸಾಲದ ರೂಪದಲ್ಲಿ ಹಂಚಲಾಗಿತ್ತ ಎಂಬ ಆರೋಪ ಕೇಳಿ ಬಂದಿದೆ. ಶಾಸಕ ಯಶ್ ಪಾಲ್ ಸುವರ್ಣ ಅವರು ಅಧ್ಯಕ್ಷರಾಗಿರುವ ಈ ಒಂದು ಮಹಾಲಕ್ಷ್ಮಿ ಕೋಪರೇಟಿವ್ ಬ್ಯಾಂಕ್ ನಲ್ಲಿ ಗ್ರಾಹಕರಿಗೆ 20 ಸಾವಿರ ಸಾಲ ನೀಡಿ 2 ಲಕ್ಷದ ವರೆಗೆ ಸುಲಿಗೆಗೆ ಬ್ಯಾಂಕ್ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದೆ ವೇಳೆ ಮಾಜಿ ಶಾಸಕ ರಘುಪತಿ ಭಟ್ ಸಂತ್ರಸ್ತರ ವಿರುದ್ಧ ಧ್ವನಿ ಎತ್ತಿದ್ದು, ಶಾಸಕ ಯಶ್ ಪಾಲ್ ಸುವರ್ಣ ರಘುಪತಿ ಭಟ್ ಅವರಿಗೆ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದಾರೆ. ಆಣೆ ಪ್ರಮಾಣಕ್ಕೆ ಬರುವಂತೆ ರಘುಪತಿ ಭಟ್ಗೆ ಆಹ್ವಾನ ನೀಡಿದ್ದಾರೆ. ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ ರಘುಪತಿ ಭಟ್ ನೀವು ಹೇಳಿದಂತೆ ಆಣೆ ಪ್ರಮಾಣ ಮಾಡೋಣ ಎಂದ ರಘುಪತಿ ಭಟ್, ನೀವು ಬನ್ನಿ ಸಂತ್ರಸ್ತರನ್ನು ಕರೆದುಕೊಂಡು ಬರುತ್ತೇನೆ. ದಂಡ ಮತ್ತು ಬಡ್ಡಿ ಸಹಿತ ವಸೂಲಿಗೆ ಬಂದಿರುವ ಸತ್ಯಾಸತ್ಯತೆ ಗೊತ್ತಾಗಲಿ ಎಂದು ಸವಾಲು ಸ್ವೀಕರಿಸಿದ್ದಾರೆ.