ಬೆಳಗಾವಿ : ನಿನ್ನೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯಲ್ಸಿ ಸಿಟಿ ರವಿ ಅವರನ್ನು ಇದೀಗ ಬೆಳಗಾವಿಯ ಜೆಎಂಎಫ್ ಸಿ ಕೋರ್ಟಿಗೆ ಪೊಲೀಸರು ಹಾಜರುಪಡಿಸಿದ್ದರು. ಇತ್ತ ಇನ್ನೊಂದು ಕಡೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ನಿನ್ನೆ ಸಿ ಟಿ ರವಿ ಹೇಳಿದ್ದನ್ನು ಬಿಜೆಪಿಯ ಸದಸ್ಯರು ಕೇಳಿಸಿಕೊಂಡಿದ್ದರು. ಬಳಿಕ ನನ್ನ ಕಿವಿಯಲ್ಲಿ ಬಂದು sorry ಕೇಳಿದ್ದಾರೆ. ಸದನದಲ್ಲಿ ಬಿಜೆಪಿ ಸದಸ್ಯರು ಒಂತರ ಧೃತರಾಷ್ಟ್ರರಾದರು ಎಂದು ಕಣ್ಣೀರು ಹಾಕಿದರು.
ನಿನ್ನೆ ನಡೆದ ಘಟನೆ ಕುರಿತಂತೆ ಇಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು, ಸಿಟಿ ರವಿಯವರು ನನಗೆ 10 ಬಾರಿ ತೇಜೋವಧೆ ಮಾಡಿದರು. ಈ ವೇಳೆ ಬಿಜೆಪಿ ಸದಸ್ಯರು ಕೂಡ ಅವರು ಬಳಸಿದ ಪದವನ್ನು ಕೇಳಿಸಿಕೊಂಡಿದ್ದಾರೆ. ಆದರೆ ಬಹಿರಂಗವಾಗಿ ಯಾರು ಖಂಡಿಸಲೇ ಇಲ್ಲ ಸದನದಲ್ಲಿ ಬಿಜೆಪಿಯವರು ದೃತರಾಷ್ಟ್ರರಾದರು ಎಂದು ಸುದ್ದಿಗೋಷ್ಠಿಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕಣ್ಣೀರು ಹಾಕಿದರು.
ನನ್ನ ಪಕ್ಷ ನನ್ನ ಜೊತೆಗೆ ನಿಂತುಕೊಂಡಿತು. ಅಶ್ಲೀಲ ಪದವನ್ನು ಕೆಲ ಬಿಜೆಪಿಯವರು ಸಹ ಕೇಳಿಸಿಕೊಂಡರು ಬಳಿಕ ನನ್ನ ಕಿವಿಯಲ್ಲಿ ಬಂದು sorry ಹೇಳಿದರು. ಆದರೆ ಬಹಿರಂಗವಾಗಿ ಯಾರೂ ಖಂಡಿಸಲೇ ಇಲ್ಲ. ನಾವು ಪ್ರತಿಭಟನೆ ಮಾಡುತ್ತಿದ್ದಾಗ ಸಭಾಪತಿಯವರು ಕಲಾಪ ಮುಂದೂಡಿದರು. ಈ ವೇಳೆ ಸಿಟಿ ರವಿಯವರು ರಾಹುಲ್ ಗಾಂಧಿ ಅವರಿಗೆ ಡ್ರಗ್ ಅಡಿಕ್ಟ್ ಎಂದು ಹೇಳುತ್ತಿದ್ದರು. ನೀವು ಕೂಡ ಆಕ್ಸಿಡೆಂಟ್ ಮಾಡಿದ್ದೀರಾ. ಹಾಗಾದ್ರೆ ನೀವು ಕೂಡ ಕೊಲೆಗಾರರ ಎಂದು ನಾನು ಹೇಳಿದೆ. ಈ ವೇಳೆ ಎಂಎಲ್ಸಿ ಸಿಟಿ ರವಿ ಅವರು ನನ್ನ ತೇಜೋವಧೆ ಮಾಡಿದರು. ಸಿಟಿ ರವಿ ಒಮ್ಮೆಯಲ್ಲ 10 ಬಾರಿ ಹೇಳಿ ನನ್ನ ತೇಜೋವಧೆ ಮಾಡಿದರು ಎಂದರು.
ಸಿಟಿ ರವಿ ಕೋರ್ಟ್ ಗೆ ಹಾಜರು
ನಿನ್ನೆ ಸುವರ್ಣಸೌಧದಲ್ಲಿ ಕಲಾಪದ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತು ಅಮಿತ್ ಶಾ ಹೇಳಿಕೆಗೆ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಬಿಜೆಪಿಯ ಸದಸ್ಯರು ಕೂಡ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಟಿ ರವಿ ಅವರಿಗೆ ಕೊಲೆಗಡುಕ ಎಂದು ಕರೆದರೆ, ಆ ವೇಳೆ ಸಿಟಿ ರವಿಯವರು ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ.ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 75 ಹಾಗೂ 79 ಕಾಯ್ದೆಯ ಅಡಿ FIR ದಾಖಲಾಗಿದೆ.
ಬಳಿಕ ಸುವರ್ಣ ಸೌಧದಿಂದ ಭದ್ರತೆಯೊಂದಿಗೆ ಹೊರಬಂದ ಸಿಟಿ ರವಿ ಅವರನ್ನು ಪೊಲೀಸರು ಅಲ್ಲಿಂದಲೇ ಅವರನ್ನು ಎತ್ತಿಕೊಂಡು ಪೋಲಿಸ್ ವಾಹನದಲ್ಲಿ ಕೂಡಿಸಿಕೊಂಡು ಖಾನಾಪುರ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಇದೀಗ ಇಂದು ಬೆಳಗಾವಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಪೊಲೀಸರು ಸಿಟಿ ರವಿ ಅವರನ್ನು ಕರೆತಂದು JMFC ಕೋರ್ಟ್ ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.