ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಕರ್ನಾಟಕ ಬಜೆಟ್ ಮಂಡನೆ ಮಾಡುತ್ತಿದ್ದಾರೆ. ಈ ನಡುವೆ ಆರಂಭದಲ್ಲಿ ಅವರು ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಬಜೆಟ್ ಆರಂಭಕ್ಕೂ ಮುನ್ನ ಆಗದು ಎಂದು ಕೈಕಟ್ಟಿ ಕುಳಿತರೆ ಸಾಗು ಕೆಲಸದು ಮುಂದೆ ಎಂಬ ಬಂಗಾರದ ಮನುಷ್ಯ ಚಲನಚಿತ್ರದ ಹಾಡಿನ ಮೂಲಕ ಆರಂಭಿಸಿದರು. ಇದೆ ವೇಳೆ ಗ್ಯಾರೆಂಟಿ ವಿಷಯದ ಕುರಿತಾಗಿ ಕೇಂದ್ರ ಸರ್ಕಾರ ಆರೋಪಿಸಿದಕ್ಕೆ ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.
ಇದೆ ವೇಳೆ ವಿಪಕ್ಷಗಳು ಗಲಾಟೆ ಗದ್ದಲಗಳನ್ನು ಆರಂಭಿಸಿದವು ಈ ವೇಳೆ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಸೇರಿದಂತೆ ವಿಪಕ್ಷಗಳು ಧಿಕ್ಕಾರ ಕೂಗಿ ವಿರೋಧ ವ್ಯಕ್ತಪಡಿಸಿದವು. ಆದರೆ ಸಿದ್ದರಾಮಯ್ಯ ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಬಜೆಟ್ ಭಾಷಣ ಮುಂದುವರಿಸಿದ್ದರು.
BREAKING :ಕೇಂದ್ರ ವಿರುದ್ಧ ಟೀಕೆಗೆ ಪ್ರತಿಪಕ್ಷ ಕಿಡಿ: ಬಜೆಟ್ ಮಂಡನೆ ವೇಳೆ ಗದ್ದಲ !
BUDGET BREAKING: ‘ಮದ್ಯಪ್ರಿಯ’ರಿಗೆ ರಾಜ್ಯ ಸರ್ಕಾರದಿಂದ ಶಾಕ್: ‘ಬಿಯರ್ ದರ’ ಮತ್ತೆ ಹೆಚ್ಚಿಸಲು ನಿರ್ಧಾರ