ಬೆಂಗಳೂರು : ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧದ ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದಂತ ಅನುಮತಿ ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೀರ್ಪು ಏನಿದೆ ಅಂತ ಮೊದಲು ತಿಳಿಯಬೇಕು. ಮುಖ್ಯಮಂತ್ರಿಗಳ ಮೇಲೆ ದೊಡ್ಡ ಷಡ್ಯಂತರ ನಡೆದಿದೆ. ನನ್ನ ಮೇಲೆ ಯಾವ ರೀತಿ ಷಡ್ಯಂತರ ಮಾಡಿ ಕೇಸ್ ಹಾಕಿದ್ದರು. ಆ ಸಂದರ್ಭದಲ್ಲಿ ನಾನು ಜೈಲಿಗೆ ಹೋಗಿ ಬಂದೆ.ಅದೇ ರೀತಿ ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಷಡ್ಯಂತರ ಮಾಡಿದೆ. ಅವರ ಕುಟುಂಬದ ಮೇಲೆ ಕೂಡ ಷಡ್ಯಂತರ ಮಾಡಿದೆ.
ಯಾವುದೇ ತನಿಖೆಗೆ ಆದೇಶ ಮಾಡಲಿ ಏನೇ ಆದರೂ ಕೂಡ ಅವರು ಕ್ಲೀನ್ ಆಗಿ ಹೊರಬರುತ್ತಾರೆ. ನನ್ನ ಪ್ರಕಾರ ಅವರದ್ದು ಯಾವುದೇ ತಪ್ಪು ಇಲ್ಲ ತಪ್ಪು ಕೂಡ ಮಾಡಿಲ್ಲ. ಮುಖ್ಯಮಂತ್ರಿ ಬದ್ಧತೆಯ ಪ್ರಕಾರವಾಗಿ ನಾವು ಎಲ್ಲ ಅವರ ಜೊತೆಗೆ ಇದ್ದೇವೆ.ರಾಜ್ಯಕ್ಕೆ ಕೊಟ್ಟಂತಹ ಕೊಡುಗೆ ಅವರು ಮಾಡಿರುವಂತಹ ಕಾರ್ಯಗಳನ್ನು ಬಿಜೆಪಿ ಸಹಿಸಿಕೊಳ್ಳಕ್ಕಾಗದೆ ಈ ರೀತಿ ಷಡ್ಯಂತರ ಮಾಡಿದೆ ಎಂದು ಆರೋಪಿಸಿದರು.