ರಾಯಚೂರು : ಕರ್ನಾಟಕ ಪಕ್ಕದ ರಾಜ್ಯ ತೆಲಂಗಾಣದಲ್ಲಿ ಇತ್ತೀಚೆಗೆ ಹಕ್ಕಿ ಜ್ವರದಿಂದ ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ಸಾವನ್ನಪ್ಪುತ್ತಿರುವ ಘಟನೆ ವಾರದಿಯಾಗಿದ್ದು, ಇದೀಗ ಈ ಹಕ್ಕಿ ಜ್ವರ ಕರ್ನಾಟಕಕ್ಕೂ ಕಾಲಿಟ್ಟಿರುವ ಶಂಕೆ ವ್ಯಕ್ತವಾಗುತ್ತಿದ್ದು, ಇದೀಗ ರಾಯಚೂರಿನಲ್ಲಿ ಕಳೆದ ಒಂದು ವಾರದಿಂದ ಪಕ್ಷಿಗಳು ಸರಣಿ ಸಾವನಪುತ್ತಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಹೌದು ಪಕ್ಕದ ತೆಲಂಗಾಣದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ರಾಯಚೂರು ಜಿಲ್ಲೆಯಲ್ಲಿ ಹಲವು ಪಕ್ಷಗಳ ನಿಗೂಢ ಸಾವಾಗುತ್ತಿದೆ ರಾಯಚೂರಲ್ಲು ಕೂಡ ಹಕ್ಕಿ ಜ್ವರ ಹರಡಿರುವ ಶಂಕೆ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಪಕ್ಷಿಗಳ ಸರಣಿ ಸಾವುಗಳಾಗುತ್ತಿವೆ. ಪಾರಿವಾಳ, ಕೊಕ್ಕರೆ, ಕಾಗೆ ಹಾಗು ಸುವರ್ಣ ಪಕ್ಷಿಗಳ ಸಾವುಗಳಾಗುತ್ತಿವೆ.
ಮಾನ್ವಿ ತಾಲೂಕಿನ ಮಕ್ಸೂದ್ ಅಲಿ ತೋಟದಲ್ಲಿ 8 ರಿಂದ 10 ಪಕ್ಷಿಗಳು ಸಾವನ್ನಪ್ಪಿವೆ. ನಾಲ್ಕು ಐದು ದಿನಗಳಿಂದ ತಾಲೂಕಿನ ಹಲವೆಡೆ ಪಕ್ಷಿಗಳ ಸಾವು ಆಗುತ್ತಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮಾನ್ವಿ ಸೇರಿದಂತೆ ಹಲವು ಕಡೆ ಹಕ್ಕಿಗಳು ಪಕ್ಷಿಗಳು ಸಾವನ್ನಪುತ್ತಿವೆ. ಈ ವೇಳೆ ಪಶು ವೈದ್ಯ ಬಸವರಾಜ್ ಅವರು ಮಾತನಾಡಿ ಈಗಾಗಲೇ ಸಾವನ್ನಪ್ಪಿದ ಪಕ್ಷಿಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಹಕ್ಕಿ ಜ್ವರ ಇದೆಯೋ ಇಲ್ಲವೋ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ತಿಳಿಸಿದರು.