ಬೆಂಗಳೂರು:ಬೆಂಗಳೂರು : ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದಿಂದ ರಾಜ್ಯದಲ್ಲಿ ಅನೇಕರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದರು ಈ ಒಂದು ಆತ್ಮಹತ್ಯೆ ತಡೆಯಲು ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿ ಮಾಡಿದ್ದು ಇತ್ತೀಚಿಗೆ ವಿಧಾನಸಭೆಯಲ್ಲಿ ಈ ಒಂದು ಮಸೂದೆ ಮಂಡನೆ ಮಾಡಲಾಗಿತ್ತು. ಬಳಿಕ ನಿನ್ನೆ ವಿಧಾನಪರಿಷತ್ ನಲ್ಲೂ ಸಹ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಮಸೂದೆ ಮಂಡನೆಯಾಯಿತು.
ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದವರಿಂದ ಬಲವಂತ, ಬೆದರಿಕೆ ಹಾಗೂ ಕಿರುಕುಳ ನೀಡಿ ಸಾಲ ವಸೂಲಿ ತಪ್ಪಿಸಲು, ಶಿಕ್ಷೆ ಮತ್ತು ದಂಡ ಪ್ರಮಾಣ ಹೆಚ್ಚಿಸಲು ಜಾರಿಗೊಳಿಸಿದ್ದ ಸುಗ್ರೀವಾಜ್ಞೆಗೆ ಕಾಯ್ದೆಯ ಬಲ ನೀಡುವ ‘ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತ ಕ್ರಮಗಳ ಪ್ರತಿಬಂಧಕ) ಮಸೂದೆ 2025ಕ್ಕೆ ನಿನ್ನೆ ವಿಧಾನ ಪರಿಷತ್‌ನಲ್ಲೂ ಸರ್ವಾನುಮತದ ಅನುಮೋದನೆ ದೊರೆಯಿತು.
ಈ ವಿಧೇಯಕವನ್ನು ಪರ್ಯಾಲೋಚನೆಗೆ ಮಂಡಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್. ಕೆ.ಪಾಟೀಲ್, ಸಾಲ, ಬಿಡ್ಡಿ ವಸೂಲಿಗೆ ಜನರ ರಕ್ತ ಹೀರುವವರಿಗೆ ಸರಿಯಾದ ಪಾಠ ಕಲಿಸಬೇಕೆಂದು ಈ ಮಸೂದೆ ತರಲಾಗಿದೆ. ಮಸೂದೆ ರೂಪಿಸುವ ಸಂಬಂಧ ಅಧಿಕಾರಿಗಳು, ಕಾನೂನು ಪಂಡಿತರು, ತಜ್ಞರು ಸೇರಿ ಹಲವರೊಂದಿಗೆ ಚರ್ಚೆ ನಡೆಸಲಾಯಿತು. ಆದರೆ ಎಲ್ಲೂ ಸರ್ವಾನುಮತ ಬರಲಿಲ್ಲ. ಬೇರೆ ಬೇರೆ ಚರ್ಚೆ, ವಾದಗಳು ಬಂದವು.