ಮೈಸೂರು : ಮನೆ ನಿರ್ಮಾಣಕ್ಕೆ ಖಾತೆ ಹಾಗೂ ನಕ್ಷೆ ಅನುಮೋದನೆಗಾಗಿ ರೂ. 40,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಬಿಲ್ ಕಲೆಕ್ಟರ್ ಒಬ್ಬ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೌದು 40 ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ದಿನೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಮನೆ ನಿರ್ಮಾಣಕ್ಕೆ ಖಾತೆ ಹಾಗೂ ನಕ್ಷೆ ಅನುಮೋದನೆಗೆ 2 ಲಕ್ಷ ರೂ. ಲಂಚ ಕೇಳಿದ್ದ ದಿನೇಶ್, ಮುಂಗಡವಾಗಿ 40 ಸಾವಿರ ರೂ. ಲಂಚ ತೆಗೆದುಕೊಳ್ಳುವಾಗ ಬಲೆಗೆ ಬಿದಿದ್ದಾರೆ.
ಎಸ್ಪಿ ಟಿಜೆ ಉದೇಶ್ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ಮಾಡಿದ್ದು, ಇನ್ಸಪೆಕ್ಟರ್ ರವಿಕುಮಾರ್ ನೇತೃತ್ವದಲ್ಲಿ ಟ್ರ್ಯಾಪ್ ಮಾಡಲಾಗಿದೆ. ದಿನೇಶ್ಗೆ ಸಹಕಾರ ನೀಡುತ್ತಿದ್ದ ಮಧ್ಯವರ್ತಿ ಚಂದನ್ ಕೂಡ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.