ಬೆಂಗಳೂರು : ಬೆಂಗಳೂರಲ್ಲಿ ಬಿಕ್ಲು ಶಿವ ಬರ್ಬರ ಕೊಲೆ ಪ್ರಕರಣ ಸಂಬಂಧ ಇಂದು ಆರೋಪಿ ಜಗದೀಶ್ ನನ್ನು 5 ದಿನ CID ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆರೋಪಿ ಜಗದೀಶ್ ನನ್ನು 5 ದಿನ CID ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಂತ ಜಗದೀಶ್ ನನ್ನು ದೆಹಲಿಯ ವಿಮಾನ ನಿಲ್ದಾಣದಲ್ಲಿ ಸಿಐಡಿ ವಶಕ್ಕೆ ಪಡೆದಿತ್ತು. ಆತನ ವಿರುದ್ಧ ಕೊಲೆ ಕೇಸ್, ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಕಳೆದ ಜುಲೈ.15ರಂದು ಬೆಂಗಳೂರಿನ ಭಾರತಿನಗರದಲ್ಲಿ ಬಿಕ್ಲು ಶಿವ ಕೊಲೆಯಾಗಿತ್ತು. ಈ ಕೊಲೆಯಲ್ಲಿ ಜಗದೀಶ್ ಎ.1 ಆರೋಪಿಯಾಗಿದ್ದರು. ಕೊಲೆಯ ಬಳಿಕ ಚೆನ್ನೈ ಏರ್ ಪೋರ್ಟ್ ಮೂಲಕ ದುಬೈಗೆ ಎಸ್ಕೇಪ್ ಆಗಿದ್ದನು.