ಬೆಂಗಳೂರು : ಇತ್ತೀಚಿಗೆ ಬೆಂಗಳೂರಲ್ಲಿ ರೌಡಿಶೀಟರ್ ಬಿಕ್ಲು ಶಿವನನ್ನು ಮಾರಕಾಸರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು ಇದೀಗ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಳೆಯಿಂದ ಸಿಐಡಿ ತನಿಖೆ ಆರಂಭವಾಗಲಿದ್ದು, ಈಗಾಗಲೇ ಸಿಐಡಿ ತಂಡ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ಫೈಲ್ ತರಿಸಿಕೊಂಡಿದ್ದು ಎಸಿಪಿ ಪ್ರಕಾಶ್ ರಾಥೋಡ್ ತನಿಖೆಯ ಮಾಹಿತಿ ಪಡೆದಿದ್ದಾರೆ.
ಇದೆ ವೇಳೆ ಪ್ರಮುಖ ಆರೋಪಿಗಳನ್ನು ಕಸ್ಟಡಿಗೆ ಪಡೆಯಲು ಸಿಐಡಿ ತಂಡ ಸಿದ್ಧತೆ ಮಾಡಿಕೊಂಡಿದೆ. ಈ ಕೇಸ್ ಕುರಿತು ನಾಳೆ ಕೋರ್ಟಿಗೆ ಸಿಐಡಿ ತಂಡ ಅರ್ಜಿ ಸಲ್ಲಿಸಲಿದೆ. ಸದ್ಯ ಸಿಐಡಿ ಮುಂದೆ ಕೊಲೆ ಆರೋಪಿ ಜಗ್ಗನ ಬಂಧನ ಟಾಸ್ಕ್ ಮುಂದಿದೆ. ದುಬೈನಲ್ಲಿ ಆರೋಪಿ ಜಗನಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲು ಇದೀಗ ಸಿಐಡಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ.