ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಬಿಜೆಪಿ ಶಾಸಕ ಭೈರತಿ ಬಸವರಾಜಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಇದೀಗ ಪ್ರಮುಖ ಆರೋಪಿಗಳಿಗೆ ಡೀಫಾಲ್ಟ್ ಜಾಮೀನು ಮಂಜೂರು ಮಾಡಲಾಗಿದೆ. ಪೊಲೀಸರ ಲೋಪದಿಂದ ಕೊಲೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಲಾಗಿದೆ.
ಚಾರ್ಜ್ ಶೀಟ್ ಸಲ್ಲಿಕೆಯಲ್ಲಿ ವಿಳಂಬವಾಗಿ ಆರೋಪ ಪಟ್ಟಿ ಸಲ್ಲಿಸಿದ ಕಾರಣಕ್ಕೆ ಜಾಮೀನು ನೀಡಲಾಗಿದೆ. ಜಗ್ಗ ಅಲಿಯಾಸ್ ಜಗದೀಶ್, ಕೆ ಕಿರಣ್, ಬಿ ವಿಮಲ್ ರಾಜ್ ಹಾಗೂ ಮದನ್ ಗೆ ಜಾಮೀನು ಮಂಜೂರು ಮಾಡಲಾಗಿದೆ. ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಜಾಮೀನು ನೀಡಿದೆ. ಕೊಲೆ ಕೇಸ್ನಲ್ಲಿ 90 ದಿನಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಬೇಕಾಗಿತ್ತು. ಆದರೆ ಕೋಕಾ ಕಾಯ್ದೆ ಅನ್ವಯಿಸಿ ಪೊಲೀಸರು ಹೆಚ್ಚುವರಿ ಸಮಯ ಪಡೆದಿದ್ದರು.
ಕೋಕ ಕಾಯಿದೆ ಅನ್ವಯಿಸಿದ್ದನ್ನು ಡಿಸೆಂಬರ್ 19 ರಂದು ಹೈಕೋರ್ಟ್ ರದ್ದು ಪಡಿಸಿತ್ತು. ಕೋಕ ಕಾಯ್ದೆ ಅಡಿ ಚಾರ್ಜ್ ಶೀಟ್ ಸಲ್ಲಿಸಲು ಹೆಚ್ಚುವರಿ ಸಮಯವೂ ರದ್ದಾಗಿತ್ತು ಡಿಸೆಂಬರ್ 22ರಂದು ಡಿಫಾಲ್ಟ್ ಜಮೀನಿಗೆ ಆರೋಪಿಗಳು ಅರ್ಜಿ ಸಲ್ಲಿಸಿದರು. ಆರೋಪಿಗಳ ಅರ್ಜಿ ಬಳಿಕ ಅದೇ ದಿನ ಸಂಜೆ ಚಾರ್ಜ್ ಶೀಟ್ ದಾಖಲಾಗಿತ್ತು. ಮ್ಯಾಜಿಸ್ಟ್ರೇಟ್ ಕೋರ್ಟ್ ಡೀಫಾಲ್ಟ್ ಜಾಮೀನು ನಿರಾಕರಿಸಿತ್ತು. ಹಾಗಾಗಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಆರೋಪಿಗಳಿಗೆ ಇದೀಗ ಜಾಮೀನು ಮಂಜೂರಾಗಿದೆ 1, ಬಾಂಡ್, 1 ಶೂರಿಟಿ ಹಾಗೂ ವಿಚಾರಣೆಗೆ ಸಹಕರಿಸಬೇಕು ಎಂದು ಹೈಕೋರ್ಟ್ ತಿಳಿಸಿದೆ.








