ಬೆಂಗಳೂರು : ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಇಂದು ಬೆಂಗಳೂರಿನ 42ನೇ ACJM ಕೋರ್ಟಿಗೆ ಹಾಜರುಪಡಿಸಿದರು. ವಿಚಾರಣೆ ಬಳಿಕ ಬೈರತಿ ಬಸವರಾಜ್ ಗೆ ಆಸ್ಪತ್ರೆ ಚಿಕಿತ್ಸೆಗೊಳಿಸುವಂತೆ ಸಿಐಡಿ ಗೆ ಕೋರ್ಟ್ ಸೂಚಿಸಿತು.
ವಿಚಾರಣೆಯ ವೇಳೆ ಸಿಐಡಿ ಪೋಲೀಸರು ಭೈರತಿ ಬಸವರಾಜ್ ಅವರನ್ನು 14 ದಿನ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿದರು. ರಿಮ್ಯಾಂಡ್ ಅಪ್ಲಿಕೇಶನ್ ಅನ್ನು ಸಿಐಡಿ ಅಧಿಕಾರಿಗಳು ಸಲ್ಲಿಕೆ ಮಾಡಿದರು ಈ ವೇಳೆದಂತೆ ಮನವಿ ಮಾಡಿದರು. ಆದರೆ ಕೋರ್ಟ್ ಜಡ್ಜ್ ವಿಚಾರಣೆ ಬಳಿಕ ಬೈರತಿ ಬಸವರಾಜ್ ಅವರಿಗೆ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಕೊಡಿಸಿ ನಾಳೆ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸುವಂತೆ ಸಿಐಡಿ ಗೆ ಕೋರ್ಟ್ ಸೂಚನೆ ನೀಡಿದೆ. ಇದಕ್ಕೂ ಮುನ್ನ ಇದೇ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಲಯಾಳಿ ಅಜಿತ್ ನನ್ನು ಏಳು ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಕೋರ್ಟ್ ಆದೇಶಿಸಿತ್ತು.








