ನವದೆಹಲಿ: ಆರ್ಜೆಡಿ ಮುಖಂಡ ರಾಜ್ ಕುಮಾರ್ ರೈ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾಟ್ನಾ ಪೂರ್ವ ಎಸ್ಪಿ ಪರಿಚಯ್ ಕುಮಾರ್ ಮಾತನಾಡಿ, “ರಾಜೇಂದ್ರ ನಗರ ಟರ್ಮಿನಲ್ ಮುಂಭಾಗದ ಲೇನ್ ಸಂಖ್ಯೆ ಹದಿನೇಳರಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈತನ ಹೆಸರು ರಾಜ್ ಕುಮಾರ್ ಅಲಿಯಾಸ್ ಅಲಾ ರೈ ಎಂದು ಹೇಳಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿಗಳು ಕಾಣಿಸಿಕೊಂಡಿದ್ದಾರೆ. ಇತರ ಅಪರಾಧಿಗಳು ಸಹ ಇರಬಹುದು ಎಂದು ಹೇಳಲಾಗುತ್ತಿದೆ “ಎಂದಿದ್ದಾರೆ.