ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸರಕು ಹಡಗುಗಳ ಮೇಲೆ ಸರಣಿ ದಾಳಿಗಳ ಮಧ್ಯೆ, ಡುಕ್ಮ್ನ ಪೂರ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಇರಾನಿನ ಎಫ್ವಿ ಅಮೀನ್ ವ್ಯಾಪಾರಿ ಹಡಗೊಂದು ಭಾರತೀಯ ಮೀನುಗಾರಿಗ ಹಡಗಿಗೆ ಡಿಕ್ಕಿ ಹೊಡೆದಿದೆ. ಕೂಡಲೇ ಭಾರತೀಯ ನೌಕಾಪಡೆ ಮತ್ತೆ ಕ್ರಮ ಕೈಗೊಂಡಿದೆ. ಹಡಗಿನಲ್ಲಿ ಆರು ಸಿಬ್ಬಂದಿ ಇದ್ದಾರೆ ಎಂದು ವರದಿಯಾಗಿದೆ.
ಕಡಲ ಭದ್ರತಾ ಕಾರ್ಯಾಚರಣೆಗಾಗಿ ಉತ್ತರ ಅರೇಬಿಯನ್ ಸಮುದ್ರದಲ್ಲಿ ನಿಯೋಜಿಸಲಾದ ಭಾರತೀಯ ನೌಕಾ ಹಡಗು ಮೀನುಗಾರಿಕಾ ಹಡಗಿನ ಸಂಕಷ್ಟದ ಕರೆಗೆ ಸ್ಪಂದಿಸಿ, ಹಾನಿ ನಿಯಂತ್ರಣ ಸಹಾಯವನ್ನು ಒದಗಿಸಿತು ಮತ್ತು ಹಡಗನ್ನ ಬಲಪಡಿಸಿದೆ. ದೋಣಿಯನ್ನ ಮತ್ತಷ್ಟು ಸಾಗಣೆಗೆ ಸುರಕ್ಷಿತವಾಗಿಸಿತು. ಗಾಯಗೊಂಡ ಮೂವರು ಸಿಬ್ಬಂದಿಗೆ ವೈದ್ಯಕೀಯ ನೆರವು ನೀಡಲಾಗಿದೆ.
“ಭಾರತೀಯ ನೌಕಾಪಡೆಯ ನಿರಂತರ ಪ್ರಯತ್ನಗಳು ಈ ಪ್ರದೇಶದಲ್ಲಿ ಸಂಚರಿಸುವ ಎಲ್ಲಾ ಹಡಗುಗಳು ಮತ್ತು ನಾವಿಕರ ಸುರಕ್ಷತೆಯ ಬಗ್ಗೆ ತನ್ನ ಸಂಕಲ್ಪವನ್ನ ಪುನರುಚ್ಚರಿಸುತ್ತದೆ” ಎಂದು ನೌಕಾಪಡೆ ಹೇಳಿಕೆಯಲ್ಲಿ ತಿಳಿಸಿದೆ.
#IndianNavy provides critical repair assisance & medical aid to Iranian Fishing Vessel(FV).
FV Ameen (six Iranian crew), operating East of Duqm, had sustained damages, allegedly due to collision with Merchant vessel. This had resulted in hull breach leading to water ingress. pic.twitter.com/Tj2zWpvQg7— SpokespersonNavy (@indiannavy) February 12, 2024
SHOCKING : ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು ‘ಆಟಗಾರ’ ಸಾವು, ವಿಡಿಯೋ ವೈರಲ್