ಮಂಡ್ಯ : ಬಿಗ್ ಬಾಸ್ ಕನ್ನಡ 12 ಈಗಾಗಲೇ ಫಿನಾಲೆ ಹಂತಕ್ಕೆ ತಲುಪಿದ್ದು ಬರುವ ಭಾನುವಾರದಂದು ಬಿಗ್ ಬಾಸ್ ವಿನ್ನರ್ ಯಾರು ಎಂದು ಘೋಷಣೆ ಆಗಲಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ, ಗಿಲ್ಲಿ, ರಘು, ದೃವಂತ್, ಕಾವ್ಯ ರಕ್ಷಿತಾ, ಹಾಗು ಧನುಷ್ ಉಳಿದುಕೊಂಡಿದ್ದು ಬರುವ ಭಾನುವಾರ ಬಿಗ್ ಬಾಸ್ ವಿನ್ನರ್ ಯಾರು ಎಂದು ನಟ ಕಿಚ್ಚ ಸುದೀಪ್ ಘೋಷಣೆ ಮಾಡಲಿದ್ದಾರೆ.
ಈಗಾಗಲೇ ಎಲ್ಲರ ಅಭಿಮಾನಿಗಳು ಸಹ ತಮ್ಮ ಮೆಚ್ಚಿನ ಸ್ಪರ್ಧಿಯ ಪರವಾಗಿ ಓಟು ಹಾಕಲು ಆರಂಭಿಸಿದ್ದು, ಕೆಲವರಂತೂ ಅಭಿಯಾನವನ್ನೇ ಮಾಡುತ್ತಿದ್ದಾರೆ. ಇದೀಗ ಗಿಲ್ಲಿ ಪರವಾಗಿ ಅವರ ಕ್ಷೇತ್ರದ ಶಾಸಕರೇ ಮತ ಕೇಳಿದ್ದಾರೆ. ಗಿಲ್ಲಿಗೆ ಓಟು ಹಾಕಿರೆಂದು ಮಂಡ್ಯ ಜಿಲ್ಲೆ ಮಳವಳ್ಳಿ ಕ್ಷೇತ್ರದ ಶಾಸಕ ನರೇಂದ್ರ ಸ್ವಾಮಿ ಅವರು ಮತ ಯಾಚನೆ ಮಾಡಿದ್ದಾರೆ.
ವಿಡಿಯೋ ಮೂಲಕ ಅವರು ಗಿಲ್ಲಿಗೆ ಮತ ಹಾಕಿ ಎಂದು ಕೇಳಿಕೊಂಡಿದ್ದು, ಈಗಾಗಲೇ ಬಿಗ್ ಬಾಸ್ ಅಂತಿಮ ಘಟ್ಟಕ್ಕೆ ತಲುಪಿದ್ದು ಮಳವಳ್ಳಿಯ ಹೆಮ್ಮೆಯ ಗಿಲ್ಲಿ ನಟ ಅವರು ಸಹ ಬಿಗ್ ಬಾಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹಾಗಾಗಿ ಅವರು ಫಿನಾಲೆ ತಲುಪಿದ್ದು, ನಾಡಿನ ಎಲ್ಲಾ ಜನತೆ ಗೆಲ್ಲಿಗೆ ಮತ ಹಾಕಿ ನಮ್ಮ ಭಾಗದ ಕಲಾವಿದನನ್ನು ಗೆಲ್ಲಿಸಬೇಕು. ನಮ್ಮ ಹಳ್ಳಿ ಪ್ರತಿಭೆಯನ್ನು ಇಡೀ ನಾಡಿಗೆ ಪರಿಚಯಿಸಬೇಕು ಹಾಗಾಗಿ ಪ್ರತಿಯೊಬ್ಬರೂ ಗಿಲ್ಲಿಗೆ ವೋಟ್ ಹಾಕಿ ಗೆಲ್ಲಿಸಬೇಕು ಎಂದು ಮನವಿ ಮಾಡಿದ್ದಾರೆ.








