ಬೆಂಗಳೂರು : ಧರ್ಮಸ್ಥಳದಲ್ಲಿ ಈಗಾಗಲೇ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯ ನಡೆಸುತ್ತಿದ್ದಾರೆ. ಅದರ ಬೆನ್ನಲ್ಲೇ ನಿನ್ನೆ ಯೂಟ್ಯೂಬರ್ಗಳ ಮೇಲೆ ಸ್ಥಳೀಯರು ಹಲ್ಲೆ ಮಾಡಿ ಗಲಾಟೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ ಈ ವೇಳೆ ಬಿಗ್ ಬಾಸ್ ಮಾಜಿ ಸ್ಪರ್ಧಿಸಿ ಕೂಡ ಅಲ್ಲಿಯೇ ಇದ್ದರು ಅವರ ಸಮ್ಮುಖದಲ್ಲಿ ಯೂಟ್ಯೂಬರ್ ಗಳ ಮೇಲೆ ಹಲ್ಲೆ ನಡೆದಿದೆ.
ಇನ್ನು ಈ ವಿಚಾರವಾಗಿ ರಜತ್ ಕಿಶನ್ ನನಗೆ ಕೊಲೆ ಬೆದರಿಕೆ ಬರುತ್ತಿದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದ್ದಾರೆ. ಕೊಲೆ ಬೆದರಿಕೆ ಬರುತ್ತಿದೆ ಎಂದು ರಜತ್ ಆರೋಪ ಮಾಡಿದ್ದು, ಪೊಲೀಸ್ ಕಮಿಷನರ್ ಗೆ ಈ ಕುರಿತು ದೂರು ಕೊಡುತ್ತೇನೆ ಎಂದು ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ ಕೊಲೆ ಬೆದರಿಕೆ ಹಾಕುವವರಿಗೆ ಬುದ್ದಿ ಕಲಿಸಬೇಕು ಎಂದು ಹೇಳಿಕೆ ನೀಡಿದ್ದಾರೆ.
ಗಿರೀಶ್ ಮತ್ತು ಮಹೇಶ್ ಸರ್ ಅವರ ಜೊತೆ ಮಾತುಕತೆ ನಡೆಸಿ ಎಲ್ಲಾ ಮುಗಿದ ಮೇಲೆ ನಾನು ಸೌಜನ್ಯ ಮನೆಗೆ ಹೋಗಿ ಅವರ ತಾಯಿಯ ಜೊತೆ ಮಾತನಾಡಿದೆ. ಈ ವಿಷಯಕ್ಕೆ ಮಾತನಾಡಿದ್ದಕ್ಕೆ ನನ್ನ ಕೊಲೆ ಮಾಡ್ತೀನಿ ಅಂತ ನನಗೆ ಬೆದರಿಕೆ ಹಾಕಿದ್ದಾರೆ. ಕೊಲೆ ಮಾಡಿದವರನ್ನು ಹಿಡಿರೊ ಅಂದರೆ ನನ್ನ ಕೊಲೆ ಮಾಡ್ತೀನಿ ಅಂದ್ರೆ ಯಾವ ನ್ಯಾಯ? ನಮ್ಮ ಸಮಾಜದಲ್ಲಿ ಎಲ್ಲಿ ಹೋಗುತ್ತಿದೆ? ಯಾರು ಇದರ ಬಗ್ಗೆ ಧ್ವನಿ ಎತ್ತು ಆಗಿಲ್ವಾ? ಏನು ಮಾತಾಡೋ ಆಗಿಲ್ವಾ? ಅವರ ಮನೆಯಲ್ಲಿ ಅಕ್ಕ ತಂಗಿಯರಿಗೆ ಹೀಗೆ ಹಾಕಿದ್ರೆ ಇತರ ಮಾತಾಡುತ್ತಿದ್ದಾರ? ಎಂದು ಆಕ್ರೋಶ ಹೊರ ಹಾಕಿದರು.