ಬೆಂಗಳೂರು : ಇನ್ಸ್ಟಾಗ್ರಾಮ್ ನಲ್ಲಿ 18 ಸೆಕೆಂಡ್ ಗಳ ಕಾಲ ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಸಿದಂತೆ ಇದೀಗ ಬಿಗ್ ಬಾಸ್ ಖ್ಯಾತಿಯ ರಜತ್ ಮತ್ತು ವಿನಯ್, ಕಾಟೇರ ಸಿನಿಮಾದ ಮಚ್ಚು ಹಿಡಿದು ರೀಲ್ಸ್ ಮಾಡಿ ವಿವಾದಕ್ಕೆ ಸಿಲುಕಿದ್ದರು. ಪೊಲೀಸರಿಗೆ ನಕಲಿ ಮಚ್ಚು ಒಪ್ಪಿಸಿದ್ದರಿಂದ ಸಾಕ್ಷ್ಯ ನಾಶದ ಕೇಸ್ ದಾಖಲಾಗುವ ಬಂಧನವಾಗುವ ಭೀತಿಯಿಂದ ಪರಾರಿ ಆಗಿದ್ದಾರೆ ಎನ್ನಲಾಗಿದೆ.
ಮಚ್ಚು ಹಿಡಿದು ಸಾರ್ವಜನಿಕರ ಸ್ಥಳದಲ್ಲಿ ರೀಲ್ಸ್ ಮಾಡಿದ್ದ ಕೇಸಿನಲ್ಲಿ ಪೊಲೀಸರು ಬಂಧಿಸಿ ಮಚ್ಚು ತಂದು ಒಪ್ಪಿಸುವಂತೆ ತಾಕೀತು ಮಾಡಿದ್ದರು. ಇದರ ಬೆನ್ನಲ್ಲಿಯೇ ರಾತ್ರೋ ರಾತ್ರಿ ರಜತ್ ಕಡೆಯವರು ನಕಲಿ ಫೈಬರ್ ಮಚ್ಚನ್ನು ಪೊಲೀಸರಿಗೆ ತಂದುಕೊಟ್ಟು ಪೊಲೀಸ್ ಠಾಣೆಯಿಂದ ಬಿಡುಗಡೆ ಆಗಿದ್ದರು.
ಆದರೆ, ರೀಲ್ಸ್ ಮಾಡಿದ್ದ ಆಯುಧವನ್ನು ಬದಲಿಸಿ ತಂದಿದ್ದಾರೆ ಎಂಬುದು ತಿಳಿದುಬಂದಲ್ಲಿ ಸಾಕ್ಷ್ಯ ನಾಶದ ಕೇಸ್ ದಾಖಲಿಸಲಾಗುವುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಪ್ರದರ್ಶನ ಮಾಡುತ್ತಾ ರೀಲ್ಸ್ ಮಾಡಿದ ಪ್ರಕರಣದಲ್ಲಿ ಬಂಧನವಾದ ಬೆನ್ನಲ್ಲಿಯೇ ಪೊಲೀಸರಿಗೆ ಒಪ್ಪಿಸಿದ ಮಚ್ಚು ನಕಲಿ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಇದೀಗ ಪೊಲೀಸರಿಗೆ ಕೊಟ್ಟಿರುವ ಮಚ್ಚು ಹಾಗೂ ರೀಲ್ಸ್‌ನಲ್ಲಿ ಬಳಕೆ ಮಾಡಿದ ಮಚ್ಚು ತಾಳೆಯಾಗುತ್ತಿಲ್ಲ ಎಂಬುದು ಪೊಲೀಸರಿಗೂ ಅನುಮಾನ ಬಂದಿದೆ. ಇದೀಗ ರಜತ್ ಹಾಗೂ ವಿನಯ್ ಅವರ ಮೇಲೆ ಸಾಕ್ಷ್ಯ ನಾಶದ ಕೇಸ್ ದಾಖಲು ಮಾಡಲಾಗುತ್ತದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಬಂಧನದ ಭೀತಿಯಿಂದ ವಿಚಾರಣೆಗೆ ಹಾಜರಾಗದ ರಜತ್, ವಿನಯ್. ವಿಚಾರಣೆಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ ರಜತ್ ಇದೀಗ ಇಬ್ಬರ ಫೋನ್ ಕೂಡ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದಾರೆ. ಆದರೆ, ಇದುವರೆಗೂ ಠಾಣೆ ಬಳಿ ರಜತ್, ವಿನಯ್ ಬಂದಿಲ್ಲ. ಬಂಧನದ ಭೀತಿಯಿಂದ ಠಾಣೆಗೆ ಹಾಜರಾಗದೆ ಬಿಗ್ ಬಾಸ್ ಸ್ಪರ್ಧಿಗಳು ಎಸ್ಕೇಪ್ ಆಗಿದ್ದಾರಾ? ಎಂಬ ಅನುಮಾನ ವ್ಯಕ್ತವಾಗುತ್ತಿವೆ.