ಮೈಸೂರು : ಮುಡಾ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದೀಗ ಈ ಒಂದು ಪ್ರಕರಣಕ್ಕೆ ಸ್ಪೋಟಕ ತಿರುವು ಸಿಕ್ಕಿದ್ದು, ಲೋಕಾಯುಕ್ತ ಡಿವೈಎಸ್ಪಿ ಎಸ್. ಕೆ ಮಾಲತೇಶ್ ಅವರು ಲೋಕಾಯುಕ್ತ ಸರ್ಚ್ ವಾರೆಂಟ್ ಜಾರಿಯಾದ ಕೂಡಲೇ, ಮುಡಾಗೆ ಬಂದು ಸುಮಾರು 144 ದಾಖಲೆಗಳ ಇರುವಂತಹ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೌದು ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರಂಟ್ ಜಾರಿಯಾಗಿದ್ದರೂ ಡಿವೈಎಸ್ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ, ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವರಿಗೆ ವಿಷಯವನ್ನು ತಿಳಿಸಲಾಗಿದೆ, ಅಲ್ಲದೆ ಡಿ ವೈ ಎಸ್ ಪಿ ಎಸ್ ಕೆ ಮಾಲತೇಶ್ ಅವರು ಮೈಸೂರು ಪ್ರಾಧಿಕಾರಕ್ಕೆ ಬಂದಿದ್ದರು. ಒಟ್ಟು 144 ಕಡತಗಳನ್ನ ತೆಗೆದುಕೊಂಡು ಹೋಗಿದ್ದರು ಎಂದು ಲೋಕಾಯುಕ್ತವೇ ತನ್ನ ರಿಪೋರ್ಟ್‌ನಲ್ಲಿ ಉಲ್ಲೇಖಿಸಿತ್ತು.
ಮುಡಾದಲ್ಲಿನ ದಾಖಲೆ ಜಪ್ತಿಗೆ ಲೋಕಾಯುಕ್ತ ಸರ್ಚ್ ವಾರೆಂಟ್ ಸಿದ್ಧಪಡಿಸಿಕೊಂಡಿತ್ತು. ಜೂನ್ 28ರ ಸಂಜೆ ಸರ್ಚ್ ವಾರೆಂಟ್ ಸಿದ್ಧವಾಗಿತ್ತು. ಸರ್ಚ್ ವಾರೆಂಟ್ ಸಿದ್ಧವಾದ 12 ತಾಸಿನೊಳಗೆ ಡಿವೈಎಸ್ಪಿ ಎಸ್ಕೆ ಮಾಲತೇಶ್ ಅವರು, ಮುಡಾ ಕಚೇರಿಗೆ ಆಗಮಿಸಿ ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಲೋಕಾಯುಕ್ತವೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಹಾಗಾಗಿ ಈ ಒಂದು ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ.








