ಬೆಂಗಳೂರು : ಹಾಸನ ಜಿಲ್ಲೆಯ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎಚ್ ಡಿ ರೇವಣ್ಣ ಅವರ ವಿರುದ್ಧ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪಹರಣಕ್ಕೆ ಒಳಗಾದ ಸಂತ್ರಸ್ತ ಮಹಿಳೆ ವಿಡಿಯೋ ಹೇಳಿಕೆ ಒಂದನ್ನು ಬಿಡುಗಡೆ ಮಾಡಿದ್ದು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ.
ಹೌದು ಅಪಹರಣಕ್ಕೆ ಒಳಗಾದ ಮಹಿಳೆ ಇದೀಗ ಸುಮಾರು 2 ನಿಮಿಷ 35 ಸೆಕೆಂಡುಗಳನ್ನು ಒಳಗೊಂಡಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದೂ, ವಿಡಿಯೋದಲ್ಲಿ ನನ್ನನ್ನು ಯಾರು ಕಿಡ್ನ್ಯಾಪ್ ಮಾಡಿಲ್ಲ. ನಾನಾಗಿಯೇ ಮನೆಯಿಂದ ಬಂದಿದ್ದೇನೆ.ಭವಾನಿ, ಎಚ್ ಡಿ ರೇವಣ್ಣ, ಪ್ರಜ್ವಲ್ M ಹಾಗೂ ಬಾಬಣ್ಣರಿಂದ ಯಾವುದೇ ರೀತಿಯಾಗಿ ತೊಂದರೆ ಆಗಿಲ್ಲ.
ನಮ್ಮ ಊರಿನವರು ಏನೇನು ಮಾತನಾಡಿದ್ದನು ಕೇಳಿ ಬೇಸರವಾಗಿತ್ತು ಹೀಗಾಗಿ ನಾಲ್ಕು ದಿನ ಇದ್ದು ಹೋಗೋಣವೆಂದು ನೆಂಟರ ಮನೆಗೆ ಬಂದಿದ್ದೇನೆ. ಸಂಬಂಧಿಕರ ಮನೆಯಲ್ಲಿ ಇದ್ದೇನೆ ಎರಡು ದಿನಗಳ ಬಳಿಕ ನಾನೇ ಬರುತ್ತೇನೆ.ನನ್ನ ಮಗ ಗೊತ್ತಿಲ್ಲದೆ ಗಾಬರಿಯಿಂದಾಗಿ ಹೀಗೆ ಮಾಡಿದ್ದಾನೆ. ನಾಲ್ಕು ಜನ ಕಾಲ ಕಳೆದು ಬರಲು ನಾನೇ ನೆಂಟರ ಮೆನೆಗೆ ಬಂದಿದ್ದೇನೆ.ಟಿವಿ ನೋಡಿದಾಗ ಈ ರೀತಿ ಮಾಡಿದ್ದಾರೆಂದು ನನಗೆ ಗೊತ್ತಾಯಿತು ಎಂದು ಸಂತ್ರಸ್ತೆ ಮಹಿಳೆ ಇದೀಗ ವಿಡಿಯೋದಲ್ಲಿ ತಿಳಿಸಿದ್ದಾಳೆ. ಎಂದು ವಿಡಿಯೋದಲ್ಲಿ ಮಹಿಳೆ ತಿಳಿಸಿದ್ದಾಳೆ.
ಹೌದು ಶಾಸಕ ರೇವಣ್ಣ ಅವರು ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಪಹರಣಕ್ಕೆ ಒಳಗಾದ ಮಹಿಳೆಯ ಮಗ ಇತ್ತೀಚಿಗೆ ಮೈಸೂರಿನ ಕೆ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದನು. ಯುವಕನ ದೂರಿನ ಮೇರೆಗೆ ಕೆಆರ್ ನಗರದಲ್ಲಿ ಎಚ್ ಡಿ ರೇವಣ್ಣ ಹಾಗೂ ಅವರ ಸಂಬಂಧಿ ಸತೀಶ್ ಬಾಬು ಎನ್ನುವ ವಿರುದ್ಧ FIR ದಾಖಲಾಗಿತ್ತು.
ಅದರಂತೆ ಎಸ್ಐಟಿ ಅಧಿಕಾರಿಗಳು ಸಂತ್ರಸ್ತ ಮಹಿಳೆಯ ಮಗ ನೀಡಿದ ದೂರಿನ ಆಧಾರದ ಮೇಲೆ ಎಚ್ಡಿ ರೇವಣ್ಣ ಅವರನ್ನು ಕಳೆದ ಕೆಲವು ದಿನಗಳ ಹಿಂದೆ ಬಂಧಿಸಿದ್ದರು ಇದಾದ ನಂತರ ಎಚ್‌ಡಿ ರೇವಣ್ಣ ಅವರು ಎರಡು ಬಾರಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೇ 14ರ ಅವಧಿಯವರೆಗೆ ಎಸ್ಐಟಿ ಕಸ್ಟಡಿಗೆ ನೀಡಿ ಇತ್ತೀಚಿಗೆ ಆದೇಶ ಹೊರಡಿಸಿತ್ತು.ಇದೀಗ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯು ವಿಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಕರಣಕ್ಕೆ ಸ್ಫೋಟಕ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.