ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ಬಳಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಅಪಘಾತವಾಗಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾರಿನಲ್ಲಿ ಬೃಹತ್ ಮೊತ್ತದ ಹಣ ಸಾಗಿಸುತ್ತಿದ್ದರು ಹಾಗಾಗಿ ಒಬ್ಬರೇ ಪ್ರಯಾಣ ಮಾಡಿದ್ದಾರೆ ಎಂದು ಸ್ಪೋಟಕ ಆರೋಪ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪಘಾತದ ವೇಳೆ ಮೊದಲು ನಾಯಿ ತಪ್ಪಿಸಲು ಅಪಘಾತ ಅಂದ್ರು. ನಂತರ ಹಿಟ್ & ರನ್ ಅಂದ್ರು, ಡೈವರ್ ನಿದ್ದೆಗೆ ಜಾರಿದ್ರು ಅನ್ನೋದು ಸತ್ಯವಾ? ಎಸ್ಕಾರ್ಟ್ ಇಲ್ಲದೇ ಪ್ರಯಾಣ ಮಾಡಿದ್ದು ಯಾಕೆ? ಒಬ್ಬರೇ ಪ್ರಯಾಣ ಮಾಡಿದ್ದರ ಗುಟ್ಟೇನೂ? ಸಚಿವರ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು ಎಂದು ಸ್ಪೋಟಕವಾದ ಆರೋಪ ಮಾಡಿದ್ದಾರೆ.
ದೊಡ್ಡ ಮೊತ್ತದ ಹಣ ಆ ಕಾರಿನಲ್ಲಿ ಸಾಗಿಸಲಾಗುತ್ತಿತ್ತು. ಜನರು ಇದರ ಬಗ್ಗೆ ಕೇಳುತ್ತಿದ್ದಾರೆ. ಅಪಘಾತದ ಬಳಿಕ ದೂರು ದಾಖಲಿಸುವ ಮುನ್ನ ಕಾರನ್ನ ಬೇರೆಡೆ ಸಾಗಿಸಿದ್ದು ಯಾಕೆ? ಗನಮ್ಯಾನ್. ಎಸ್ಕಾರ್ಟ್ ಕೊಟ್ಟಿದ್ರು ಎಲ್ಲರನ್ನೂ ಯಾಕೆ ಬಿಟ್ಟು ಹೋಗಿದ್ದು? ಸೆಕ್ಯೂರಿಟಿ ಬಿಟ್ಟು ಯಾಕೆ ಟ್ರಾವಲ್ ಮಾಡಿದ್ರೀ? ಘಟನೆ ನಡೆದಿದ್ದು ಹೇಗೆ? ಸತ್ಯ ಎನೂ ಅಂತಾ ಜನರಿಗೆ ತಿಳಿಸಿ ಎಂದು ಬಿಜೆಪಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಹಾಗಾಗಿ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ,ಹಾಲಿ ನ್ಯಾಯಾದೀಶರಿಂದ ತನಿಖೆ ಮಾಡಬೇಕು, ಯಾರು ಯಾರು ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಆ ಬಗ್ಗೆ ತನಿಖೆಯಾಗಲಿ, ಕಾರಿನಲ್ಲಿ ಎಷ್ಟು ಬ್ಯಗ್‌ಗಳು ಇದ್ವು ಅನ್ನೋದನ್ನ ತನಿಖೆ ಮಾಡಲಿ ಎಂದು ಛಲವಾದಿ ನಾರಾಯಣ ಸ್ವಾಮಿ ಅಗ್ರಹಿಸಿದ್ದಾರೆ. ಚಲವಾದಿ ನಾರಾಯಣಸ್ವಾಮಿಯವರ ಈ ಒಂದು ಹೇಳಿಕೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.