ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ದೊರೆತ ಮಾನವನ ಮೂಳೆಗಳು ಹಾಗೂ ಬುರುಡೆಗಳ ಕುರಿತು ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಂಗ್ಲೆ ಗುಡ್ಡದಲ್ಲಿ ಇದುವರೆಗೂ ದೊರೆತ ಬುರುಡೆ ಮತ್ತು ಮೂಳೆಗಳನ್ನು SIT ಅಧಿಕಾರಿಗಳು FSL ಗೆ ಕಳುಹಿಸಿಯೇ ಇಲ್ಲ ಎನ್ನುವುದು ಬಯಲಾಗಿದೆ.
ಹೌದು ಬಂಗ್ಲೆ ಗುಡ್ಡದಲ್ಲಿ ಸಿಕ್ಕಿದ್ದ 7 ಬುರುಡೆ ಹಾಗೂ ಹಲವು ಮೂಳೆಗಳನ್ನು ಎಸ್ಐಟಿ ಅಧಿಕಾರಿಗಳು FSL ಗೆ ಕಳುಹಿಸಿಯೇ ಇಲ್ಲ ಎಂದು ತಿಳಿದುಬಂದಿದೆ . ಸೆಪ್ಟೆಂಬರ್ 6 ರಂದು ಬುರುಡೆ ಮತ್ತು ಮೂಳೆಗಳು ಬಂಗ್ಲೆ ಗುಡ್ಡದಲ್ಲಿ ಪತ್ತೆಯಾಗಿದ್ದವು. ಇದುವರೆಗೂ ಪತ್ತೆಯಾದ ಬುರುಡೆ ಮತ್ತು ಮೂಳೆಗಳು ಯಾರದ್ದು ಎಂದು ಕುತೂಹಲ ಮೂಡಿಸಿದ್ದು, ಎಸ್ಐಟಿಗೆ ಸಲ್ಲಿಕೆಯಾದ ಎಫ್ಎಸ್ಎಲ್ ರಿಪೋರ್ಟ್ ಇದೀಗ ಲಭ್ಯವಾಗಿದೆ.
ಈ ಒಂದು ವರದಿಯಲ್ಲಿ ಮೂರು ತಲೆ ಬುರುಡೆ ಮತ್ತು ಮೂಳೆಗಳ ಎಫಎಸ್ಎಲ್ ವರದಿ ಲಭ್ಯವಾಗಿದೆ. ಮೊದಲನೆಯದ್ದು ಚಿನ್ನಯ್ಯ ಕೋರ್ಟಿಗೆ ತಂದಿದ್ದ ಬುರುಡೆ ಇದು ಸುಮಾರು 40 ವರ್ಷದ ಗಂಡಸಿನ ತಲೆ ಬುರುಡೆ ಎಂದು ತಿಳಿದುಬಂದಿದೆ. ಇನ್ನು ಸ್ಮಾರ್ಟ್ ನಂಬರ್ 6ರಲ್ಲಿ ಸಿಕ್ಕ ಬುರುಡೆ ಮತ್ತು ಮೂಳೆಗಳ ವರದಿ ನೋಡುವುದಾದರೆ ಇದು 25 ರಿಂದ 30 ವರ್ಷದ ಪುರುಷನ ಮೂಳೆ ಎಂದು ಬಯಲಾಗಿದೆ. ಇನ್ನು ಸ್ಪಾಟ್ ನಂಬರ್ 15 ಮರದ ಕೆಳಗೆ ಸಿಕ್ಕ ಬುರುಡೆ ಸಹ 35 ರಿಂದ 39 ವಯಸ್ಸಿನ ಗಂಡಸಿನ ಮೂಳೆ ಎಂದು ತಿಳಿದುಬಂದಿದೆ.
ಹಾಗಾಗಿ ಎಸ್ಐಟಿ ಅಧಿಕಾರಿಗಳು ಮೇಲ್ನೋಟಕ್ಕೆ ಪುರುಷರ ಮೂಳೆ ಎಂದು ತಿಳಿದಾಗ ಎಫ್ ಎಸ್ ಎಲ್ ವರದಿಗೆ ಕಳುಹಿಸಿಲ್ಲ ಎನ್ನುವುದು ಬಂದಿದೆ. ಆದರೆ ಮೂವರ ಸಾವಿಗೆ ನಿಖರವಾದ ಕಾರಣ ಇದುವರೆಗೂ ಗೊತ್ತಾಗಿಲ್ಲ. ಮೂಳೆಗಳ ಮೇಲೆ ಮೂರಿದ ಮತ್ತು ಹಲ್ಲೆಗೆ ಒಳಗಾದಂತಹ ಯಾವುದೇ ಕುರುಹು ಇಲ್ಲ. ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಹಾಗಾಗಿ ಅಹಮದಾಬಾದ್ ಎಫೆಸಲ್ ಲ್ಯಾಬ್ ಗೆ ಸ್ಯಾಂಪಲ್ ಇದೀಗ ರವಾನೆ ಮಾಡಲಾಗಿದ್ದು ಅಲ್ಲಿಂದ ವರದಿ ಬಂದ ಬಳಿಕ ಮಾಹಿತಿ ತಿಳಿದು ಬರಲಿದೆ.