ಬೆಂಗಳೂರು : ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು ಭೈರತಿ ಬಸವರಾಜ ವಿರುದ್ಧ ನಾನು ದೂರು ಕೊಟ್ಟೆ ಇಲ್ಲ ಎಂದು ಕೊಲೆಯಾದ ಬಿಕ್ಲು ಶಿವು ತಾಯಿ ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದು, ಪೊಲೀಸರೇ ಅವರ ಹೆಸರು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಮಧ್ಯಾಗಳೊಂದಿಗೆ ಮಾತನಾಡಿದ ಅವರು, ಯಾರ ಬಗ್ಗೆ ದೂರು ನೀಡಿದ್ದಾರೆ ಏನೋ ಗೊತ್ತಿಲ್ಲ ಅಂದರೆ ನಾನು ಯಾರ ಹೆಸರು ಹೇಳಲಿ? ನಾನು ನನ್ನ ಮಗ ಶಿವು ಕೊಲೆಯಾದ ಟೆನ್ಶನ್ ನಲ್ಲಿ ಇದ್ದೆ, ಕೊಲೆ ಮಾಡಿದ್ದು ನೋಡಿದೆ ಅನ್ನೋ ಕೇಸ್ ಸ್ಟ್ರಾಂಗ್ ಆಗುತ್ತೆ ಹೀಗಂತ ಹೇಳಿದಾಗ ನಾನು ಹು ಅಂದಿರಬೇಕು ಅಷ್ಟೇ ಎಂದು ವಿಜಯಲಕ್ಷ್ಮಿ ಹೇಳಿಕೆ ನೀಡಿದ್ದಾರೆ.
ಪೊಲೀಸರೇ ಅವರ ಹೆಸರು ಹಾಕಿಕೊಂಡಿರುವುದು. ನನ್ನ ಮಗನ ಕೊಲೆಯಾಗಿದ್ದು ಅವನಿಗೆ ನ್ಯಾಯ ಬೇಕು ಅವರ ಮಕ್ಕಳಿಗೆ ರಕ್ಷಣೆ ನೀಡಬೇಕು. ನಾನು ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ವಿಷಯ ಏನು ಅಂತ ನನಗೆ ಗೊತ್ತಿಲ್ಲದ ಮೇಲೆ ಯಾರ ವಿರುದ್ಧ ನಾನು ದೂರು ಕೊಡಲಿ ಎಂದು ಪ್ರಶ್ನಿಸಿದ್ದಾರೆ.