ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿಗೆ 500 ಪುಟುಗಳ ದಾಖಲೆಯನ್ನು ನೀಡಿದ್ದಾರೆ.
ಗಿರೀಶ್ ಮಟ್ಟಣ್ಣನವರ್ ಅವರು ಇಂದು ಎಸ್ ಐಟಿಗೆ 500 ಪುಟಗಳ ದಾಖಲೆಗಳನ್ನು ನೀಡಿದ್ದು, ಧರ್ಮಸ್ಥಳದಲ್ಲಿ ಕೆಲವು ಅಸಹಜ ಸಾವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ. ಕಳೆದ 35 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಆಗಿರುವ ಅಸಹಜ ಸಾವುಗಳ ವಿವರವಾದ ದಾಖಲೆ ನೀಡಿದ್ದಾರೆ.
ಇನ್ನು ಇಂದು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ ಸಮೀರ್ ಹಲವು ದಾಖಲೆಗಳ ಸಮೇತ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಬ್ಯಾಗ್ ಹಿಡಿದುಕೊಂಡು ವಕೀಲರ ಜೊತೆ ಸಮೀರ್ ಹಾಜರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇಂದು ಸಮೀರ್ ವಿಚಾರಣೆ ಎದುರಿಸಲಿದ್ದು, ಹಲವು ದಾಖಲೆಗಳನ್ನ ನೀಡಲಿದ್ದಾರೆ.