ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಪಟ್ಟಂತೆ ಗಲಾಟೆ ನಡೆದು ಫೈರಿಂಗ್ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆ ನಡೆದಿದೆ. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು ಶಾಸಕ ಜನಾರ್ಧನ ರೆಡ್ಡಿ ಮನೆಯಲ್ಲಿ ಐವತ್ತಕ್ಕೂ ಹೆಚ್ಚು ದೊಣ್ಣೆಗಳು ಇದೀಗ ಪತ್ತೆಯಾಗಿವೆ
ಹೌದು ಬಳ್ಳಾರಿ ಬ್ಯಾನರ್ ಘರ್ಷಣೆ ಕೇಸಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು ಶಾಸಕ ಜನಾರ್ಧನ ರೆಡ್ಡಿ ಮನೆಯಲ್ಲೂ ದೊಣ್ಣೆಗಳ ರಾಶಿ ಪತ್ತೆಯಾಗಿದೆ. ಜನಾರ್ದನ ರೆಡ್ಡಿ ಮನೆ ಕಾಂಪೌಂಡ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ದೊಣ್ಣೆಗಳು ಪತ್ತೆಯಾಗಿದ್ದು ಗಲಾಟೆಯ ವೇಳೆ ಬೆಂಬಲಿಗರಿಂದಲೂ ದೊಣ್ಣೆಗಳು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಗಲಾಟೆ ಬಳಿಕ ಕಂಪೌಂಡಲ್ಲಿ ಬೆಂಬಲಿಗರು ದೊಣ್ಣೆಗಳನ್ನು ಇಟ್ಟಿದ್ದಾರೆ.
ಶಾಸಕ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಆಪ್ತನ ಕೈಯಲ್ಲಿ ದೊಣ್ಣೆ ಕಂಡಿದ್ದು ಗಲಾಟೆಯ ವೇಳೆ ಪಾಲಣ್ಣ ದೊಣ್ಣೆ ಹಿಡಿದು ನಿಂತಿದ್ದ. ಗುಂಪು ಕಟ್ಟಿಕೊಂಡು ಪಾಲಣ್ಣ ದೊಣ್ಣೆ ಹಿಡಿದು ನಿಂತಿದ್ದ ಮಾಜಿ ಬೂಡಾ ಅಧ್ಯಕ್ಷನಾಗಿದ್ದ ಪಾಲಣ್ಣ ಗಲಾಟೆಯ ದಿನ ಕೈಯಲ್ಲಿ ದೊಣ್ಣೆ ಹಿಡಿದಿದ್ದ. ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲುಗೆ ಪಾಲಣ್ಣ ಆಪ್ತನಾಗಿದ್ದಾನೆ. ಈತನ ಕೈಯಲ್ಲಿಯೇ ಗಲಾಟೆಯ ವೇಳೆ ದೊಣ್ಣೆ ಹಿಡಿದಿದ್ದು ಕಂಡುಬಂದಿತ್ತು.








