ಬೆಂಗಳೂರು : ನಾನು ಡಿಕೆ ಸುರೇಶ ಸಹೋದರಿ ಎಂದು ಹೇಳಿ ವಂಚನೆ ಎಸಗಿರುವ ಆರೋಪಿ ಐಶ್ವರ್ಯ ಗೌಡ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.ಐಶ್ವರ್ಯ ಗೌಡ ವಿರುದ್ಧ ಸೌಭಾಗ್ಯ ಎಂಬ ಮಹಿಳೆ ದೂರು ನೀಡಿರುವ ವಿಚಾರವಾಗಿ ಸೌಭಾಗ್ಯ ವಿರುದ್ಧ ವರ್ಷದ ಹಿಂದೆಯೇ ಐಶ್ವರ್ಯ ಸಹೋದರ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಹೌದು ಈ ಹಿಂದೆಯೇ ಐಶ್ವರ್ಯ ಜೊತೆಗಿನ ವ್ಯವಹಾರವನ್ನು ಸೌಭಾಗ್ಯ ಕಳೆದುಕೊಂಡಿದ್ದರು. ಸೌಭಾಗ್ಯ ಜೊತೆಗಿನ ವ್ಯವಹಾರ ಅಂತ್ಯಗೊಂಡ ಕುರಿತ ವಿಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ. ಇದೀಗ ವಿಡಿಯೋ ದಾಖಲೆ ಬಿಡುಗಡೆ ಮಾಡಿರುವ ಐಶ್ವರ್ಯ ಗೌಡ ಟೀಂ. ನನಗೂ ಐಶ್ವರ್ಯ ಗೌಡಗು ಇದ್ದ ಹಣದ ವ್ಯವಹಾರ ಮುಕ್ತಾಯವಾಗಿದೆ.ನನಗೆ ಐಶ್ವರ್ಯ ಗೌಡ ಅಲಿಯಾಸ್ ನವ್ಯಶ್ರೀ 30 ಲಕ್ಷ ಹಣ ಕೊಟ್ಟಿದ್ದಾರೆ. ನನ್ನ ಮಗಳ ವ್ಯವಹಾರ ಕೂಡ ಪೂರ್ಣಗೊಂಡಿದೆ.
ಇನ್ನು ಮುಂದೆ ಐಶ್ವರ್ಯ ಜೊತೆಗೆ ಯಾವುದೇ ವ್ಯವಹಾರ ಇಲ್ಲ ಎಂದು ಹೇಳಿಕೆ ನೀಡಿರುವ ವಿಡಿಯೋ ಇದೀಗ ಬಿಡುಗಡೆ ಮಾಡಿದ್ದಾರೆ. ಜೊತೆಗೆ 200 ನೂರು ರೂಪಾಯಿ ಸ್ಟ್ಯಾಂಪ್ ಪೇಪರ್ ನಲ್ಲೂ ಕೂಡ ಸೌಭಾಗ್ಯ ಬರೆದುಕೊಟ್ಟಿದ್ದಾರೆ ಎನ್ನಲಾಗಿದೆ. ಸೌಭಾಗ್ಯ ಜೊತೆ ಆಕೆಯ ಪುತ್ರಿ ಶಿಲ್ಪ ಸಹಿ ಹಾಕಿದ ಒಪ್ಪಂದದ ಪತ್ರ ಕೂಡ ಬಿಡುಗಡೆ ಮಾಡಲಾಗಿದೆ. ಐಶ್ವರ್ಯ ಜೊತೆಗೆ ಹಲವರು ಸಾಕ್ಷಿಗಳಾಗಿ ಸಹಿ ಮಾಡಿರುವ ಪತ್ರ ಕೂಡ ಬಿಡುಗಡೆ ಮಾಡಲಾಗಿದೆ.