ಕೊಪ್ಪಳ : ಏಪ್ರಿಲ್ 1ರಿಂದ ತುಂಗಭದ್ರಾ ಡ್ಯಾಮ್ ನಿಂದ ಬೆಳೆಗೆ ನೀರು ಹರಿಸುವುದಿಲ್ಲ ಎಂದು ತುಂಗಭದ್ರಾ ನೀರಾವರಿ ನಿಗಮದ ಮುನಿರಾಬಾದ್ ವಲಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಡ್ಯಾಮ್ ನಿಂದ ನೀರು ಹರಿಸುವುದಿಲ್ಲ. ರೈತರು ಭತ್ತ ನಾಟಿ ಮಾಡಿದರೆ ನೀರು ಸಿಗಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ನೀರಾವರಿ ಸಲಹಾ ಸಮಿತಿ ಸಭೆಯ ಪ್ರಕಾರ ಎರಡನೇ ಬೆಳೆಗೆ ನೀರು ಬಿಡಲಾಗುತ್ತದೆ. ಮಾರ್ಚ್ 31ರವರೆಗೆ ಪ್ರತಿದಿನ ಕಾಲುವಿಗೆ ನೀರುಹರಿಸಲಾಗುತ್ತದೆ.
ಏಪ್ರಿಲ್ 1ರ ನಂತರ ಬೆಳೆಗೆ ನೀರು ಹರಿಸಲ್ಲ ಆದರೆ ಕುಡಿಯುವುದಕ್ಕೆ ಮಾತ್ರ ನೀರು ಬಳಕೆ ಮಾಡಬಹುದಾಗಿದೆ. ಹಾಗಾಗಿ ಭತ್ತದ ನಾಟಿ ಮಾಡದಂತೆ ಅಧಿಕಾರಿಗಳು ರೈತರಿಗೆ ಸೂಚನೆ ನೀಡಿದ್ದಾರೆ.ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ನಾಟಿ ನಡೆಯುತ್ತಿದ್ದು, ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗಿದೆ. ಹಾಗಾಗಿ ಅಧಿಕಾರಿಗಳು ಭತ್ತ ನಾಟಿ ಮಾಡಬೇಡಿ ಎಂದು ರೈತರಿಗೆ ಸೂಚಿಸಿದ್ದಾರೆ.