ನವದೆಹಲಿ : ಗ್ಯಾಸ್ ಸಿಲಿಂಡರ್ ಅಭಾವದ ನಡುವೆ ಇದೀಗ ಗ್ರಾಹಕರಿಗೆ ಕೇಂದ್ರ ಸರ್ಕಾರ ಇದೀಗ ಬಿಗ್ ಶಾಕ್ ನೀಡಿದೆ. PNG ಇದ್ದರೆ, ಎಲ್‌ಪಿಜಿ ಸರೆಂಡರ್ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹೌದು ಮನೆಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕ ಹೊಂದಿದ ಗ್ರಾಹಕರು ಎಲ್‌ಪಿಜಿ ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ಹಿಂತಿರುಗಿಸಬೇಕು ಎಂದು ಸೂಚನೆ ನೀಡಿದೆ. LPG ಸಿಲಿಂಡರ್ ಸಂಪರ್ಕವನ್ನು ಕಡ್ಡಾಯವಾಗಿ ಗ್ರಾಹಕರು ಹಿಂದಿರುಗಿಸಬೇಕು ಎಂದು ಪಿಎನ್‌ಜಿ ಸಿಲಿಂಡರ್ ಗ್ರಾಹಕರಿಗೆ ಕೇಂದ್ರ ಸರ್ಕಾರ ಖಡಕ್ ಸೂಚನೆ ಕೊಟ್ಟಿದೆ.
ಎಲ್‌ಪಿಜಿ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಈ ಒಂದು ಕ್ರಮ ಕೈಗೊಂಡಿದೆ. ಗ್ರಾಹಕರಿಗೆ ಸುಲಭವಾಗಿ ಸಿಲಿಂಡರ್ ಸಿಗುವಂತೆ ಮಾಡಲು ಈ ಒಂದು ಕ್ರಮ ಕೈಗೊಂಡಿದೆ. ಇನ್ನು ಬೆಂಗಳೂರಿನಲ್ಲಿ ಹೋಟೆಲ್ಗಳಲ್ಲಿ ಪ್ರತಿನಿತ್ಯ ಸಾವಿರ ಸಿಲಿಂಡರ್ ಪೂರೈಸಲು ಸರ್ಕಾರ ನಿರ್ಧರಿಸಿದೆ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.








