ಬೆಂಗಳೂರು : ನಾಳೆಯಿಂದ ಐದು ದಿನಗಳ ಕಾಲ ಸರ್ಕಾರಿ ನೌಕರರ ಉಪವಾಸ ಸತ್ಯಾಗ್ರಹ ವಿಚಾರವಾಗಿ, ವಿವಿಧ ಬೇಡಿಕೆ ಈಡೇರಿಸಿದ ಸರ್ಕಾರದ ವಿರುದ್ಧ ಮತ್ತೆ ಮುಷ್ಕರಕ್ಕೆ ಸಜ್ಜಾಗಿದ್ದಾರೆ. ಮೊದಲ ಹಂತದಲ್ಲಿ ಸಾರಿಗೆ ನೌಕರರಿಂದ ಐದು ದಿನ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್ 5ರಂದು ಸಾರಿಗೆ ಬಸ್ ಗಳನ್ನು ನಿಲ್ಲಿಸಿ ಮುಷ್ಕರ ನಡೆಸಿದ್ದ ಸಾರಿಗೆ ನೌಕರರು.ಹೈಕೋರ್ಟ್ ತಡಿಯಾಜ್ಞೆ ಹಿನ್ನೆಲೆಯಲ್ಲಿ ಮುಷ್ಕರ ಕೈ ಬಿಟ್ಟಿದ್ದರು.
ಆದರೆ ಇಲ್ಲಿಯವರೆಗೆ ನೌಕರರ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿಲ್ಲ. ಹಾಗಾಗಿ ರಾಜ್ಯ ಸರ್ಕಾರದ ವಿಳಂಬ ಧೋರಣೆ ಖಂಡಿಸಿ ಹೋರಾಟಕ್ಕೆ ಪ್ಲಾನ್ ಮಾಡಿಕೊಂಡಿದ್ದು, ರಾಜ್ಯದಲ್ಲಿ ಮತ್ತೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಬಂದ್ ಗೆ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಐದು ದಿನ ಸಾರಿಗೆ ನೌಕರರಿಗೆ ರಜೆ ರದ್ದುಗೊಳಿಸಲಾಗಿದೆ. ಕೆಎಸ್ಆರ್ಟಿಸಿಯಿಂದ ನೌಕರರಿಗೆ ಖಡಕ್ ಆದೇಶ ನೀಡಿದೆ.
ಸಾರಿಗೆ ಸಂಸ್ಥೆ ಸಾರ್ವಜನಿಕ ಉಪಯುಕ್ತ ಸೇವಾ ಸಂಸ್ಥೆ ಅಂತ ಘೋಷಣೆ ಮಾಡಿದ್ದು, ಜನರಿಗೆ ಸಮರ್ಪಕ ಸೇವೆ ಒದಗಿಸುವುದು ನಿಗಮದ ಕರ್ತವ್ಯವಾಗಿದೆ. ನಾಳೆಯಿಂದ ಅಕ್ಟೋಬರ್ 19 ರವರೆಗೆ ಉಪವಾಸ ಸತ್ಯಾಗ್ರಹದ ಅವಧಿಯಲ್ಲಿ ಸಾರಿಗೆ ಬಸ್ಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಬಾರದು ಅನಿವಾರ್ಯ ಸಂದರ್ಭ ಹೊರತುಪಡಿಸಿ ಯಾರಿಗೂ ರಜೆ ಇಲ್ಲ. ನೋ ವರ್ಕ್ ನೋ ಪೇಮೆಂಟ್ ನಿಯಮವನ್ನು ಕೆಎಸ್ಆರ್ಟಿಸಿ ಜಾರಿಗೊಳಿಸಿದೆ.