ಬೆಂಗಳೂರು : ಮೆಟ್ರೋ ಪ್ರಯಾಣದ ದರ ಏರಿಕೆ ಬೆನ್ನಲ್ಲೆ ರಾಜ್ಯದ ಜನತೆಗೆ ಮತ್ತೊಂದು ಶಾಕ್ ಎದುರಾಗಿದ್ದು, ನಾಳೆಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಲಗೇಜ್ ದರ ಹೆಚ್ಚಳ ಮಾಡಿ ಅದೇಶಿಸಲಾಗಿದೆ. ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರದಲ್ಲಿ ಇದೀಗ ಪರಿಷ್ಕರಣೆ ಮಾಡಲಾಗಿದೆ.
1 ರಿಂದ 5 ಸ್ಟೇಜ್ ವರೆಗೆ 6 ರೂಪಾಯಿ, 6ರಿಂದ 12 ಸ್ಟೇಜ್ ವರೆಗೆ 12 ರೂಪಾಯಿ, 156 ರಿಂದ 160 ಸ್ಟೇಜ್ ವರೆಗೆ 145 ಗೆ ಹೆಚ್ಚಳ ಮಾಡಲಾಗಿದೆ. ಲಗೇಜ್ ದರ ಹೆಚ್ಚಿಸಿ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ. 2021 ರಲ್ಲಿ ಪ್ರಯಾಣಿಕ ರಹಿತ ಲಗೇಜು ದರ ಏರಿಕೆಯಾಗಿತ್ತು. ಟಿಕೆಟ್ ದರ ಪರಿಷ್ಕರಣಿಯಾದಾಗ ಲಗೇಜ್ ದರ ಹೆಚ್ಚಿಸಿರಲಿಲ್ಲ. ಹಾಗಾಗಿ ಇದೀಗ ನಾಳೆಯಿಂದ ಲಗೇಜ್ ದರ ಹೆಚ್ಚಿಸಿ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾ ಆದೇಶ ಹೊರಡಿಸಿದ್ದಾರೆ.








