ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಹಾಲು ಮೊಸರು ವಿದ್ಯುತ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಪೋಷಕರಿಗೆ ಬಿಗ್ ಶಾಕ್ ನೀಡಲು ಖಾಸಗಿ ಶಾಲೆಗಳು ಮುಂದಾಗಿದ್ದು, ಖಾಸಗಿ ಶಾಲೆಗಳ ವಾಹನದ ಶುಲ್ಕ ದರ ಹೆಚ್ಚಳ ಮಾಡಲು ಖಾಸಗಿ ಶಾಲಾ ವಾಹನ ಸಂಘ ಇದೀಗ ನಿರ್ಧಾರ ಕೈಗೊಂಡಿದೆ.
ಹೌದು ಶಾಲಾ ವಾಹನ ಶುಲ್ಕ ಹೆಚ್ಚಳಕ್ಕೆ ಇದೀಗ ನಿರ್ಧರಿಸಲಾಗಿದೆ. ಖಾಸಗಿ ಶಾಲಾ ವಾಹನ ಸಂಘದಿಂದ ಈ ಒಂದು ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ 500 ರಿಂದ 600 ರೂ. ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ಸದ್ಯ ಶಾಲಾ ವಾಹನ ಶುಲ್ಕ 2 ಸಾವಿರದಿಂದ 2100 ರೂಪಾಯಿ ಶುಲ್ಕ ಇದೆ.
ಶಾಲಾ ವಾಹನ ಶುಲ್ಕ ಏರಿಕೆ ಆದರೆ ಸುಮಾರು 2500 ರಿಂದ 3000 ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಈ ಒಂದು ಶುಲ್ಕ ಹೊರೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಖಾಸಗಿ ಶಾಲಾ ವಾಹನ ಸಂಘದ ಅಧ್ಯಕ್ಷ ನಟರಾಜ ಶರ್ಮ ಮಾಹಿತಿ ನೀಡಿದ್ದಾರೆ.
ಈ ಕುರಿತು ಪೋಷಕರು ಆಕ್ರೋಶ ಹೊರಹಾಕಿದ್ದು, ಶಾಲೆಯ ಶುಲ್ಕ ಹೆಚ್ಚಾಯ್ತು, ಬುಕ್ಸ್ ದರ ಕೂಡ ಹೆಚ್ಚಾಗಿದೆ. ಈಗ ಶಾಲಾ ವಾಹನದ ಶುಲ್ಕ ಏರಿಕೆ ಯಾಕೆ ಎಂದು ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪೋಷಕರಿಗೆ ಆರ್ಥಿಕ ಹೊರೆಯಾಗುತ್ತದೆ ಎಂದು ಕೆಲ ಪೋಷಕರು ಕಿಡಿ ಕಾರಿದ್ದಾರೆ.