ಬೆಳಗಾವಿ : ಹೊಸ ವಾಹನ ಖರೀದಿ ಮಾಡುವವರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಸರ್ಕಾರದಿಂದ ರಾಜ್ಯ ರಸ್ತೆ ಸುರಕ್ಷತಾ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಾಯಿತು. ನೂತನವಾಗಿ ಖರೀದಿಸುವ ವಾಹನದ ಮೌಲ್ಯ ಆಧರಿಸಿ ಹೊಸ ಸೆಸ್ ಜಾರಿಗೊಳಿಸಲಾಗಿದೆ. ಹಾಗಾಗಿ ಹೊಸ ವಾಹನ ಖರೀದಿದಾರರಿಗೆ ಸೆಸ್ ಬಿಸಿ ತಟ್ಟಿದೆ.
ನೂತನವಾಗಿ ಖರೀದಿಸುವ ವಾಹನದ ಮೌಲ್ಯ ಆಧರಿಸಿ ಜಾರಿಗೊಳಿಸಲಾಗಿದೆ.ಹಾಲಿ ಎಲ್ಲಾ ಮಾದರಿಯ ವಾಹನಗಳಿಗೆ ಕೇವಲ ರೂ.1000 ವಿಧಿಸಲಾಗಿದ್ದು ತಿದ್ದುಪಡಿ ಅನ್ವಯ ಕಾರಿನ ಬೆಲೆ ಆಧರಿಸಿ ಶೇಕಡಾವಾರು ಸೆಸ್ ಜಾರಿಗೊಳಿಸಲಾಗುತ್ತಿದೆ. ಯಾವ ಮಾದರಿ ಕಾರುಗಳಿಗೆ ಎಷ್ಟು ವಿಧಿಸುವ ಬಗ್ಗೆ ತೀರ್ಮಾನಿಸಲಾಗುತ್ತೆ. ಎಷ್ಟು ಚೆಸ್ ವಿಧಿಸುವ ಬಗ್ಗೆ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.








