ಬೆಂಗಳೂರು : ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಮಾಡಲಾಗಿದೆ. ಶಾಸಕರು, ಸಚಿವರು ಭಾಗಿಯಾಗಿದ್ದರು. 20 ವಿಷಯಗಳ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅದರಲ್ಲಿ ಪ್ರಮುಖವಾಗಿ ಕಟ್ಟಡ ಕಲ್ಲು, ಮೈನಿಂಗ್ ಸ್ಟೋನ್ ರಾಯಲ್ಟಿ ಹೆಚ್ಚಿಸಲಾಗಿದೆ. ಆ ಮೂಲಕ ಕಟ್ಟಡ ನಿರ್ಮಾಣದ ಕನಸಿಗೆ ಬೆಲೆ ಏರಿಕೆಯ ಹೊರೆ ತಟ್ಟಿದೆ.
ಸಚಿವ ಸಂಪುಟ ಸಭೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್, ಸಂಪುಟ ಸಭೆಯಲ್ಲಿ 20 ವಿಷಯಗಳ ಬಗ್ಗೆ ಇಂದು ಚರ್ಚೆಯಾಗಿದೆ. ಉಪಖನಿಜ ರಿಯಾಯಿತಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಿದ್ದು, ಅಕ್ರಮ ಕಲ್ಲು ಗಣಿಗಾರಿಕೆ ವಿಚಾರ ಬಗ್ಗೆ ಚರ್ಚೆಯಾಗಿದೆ.ರಾಯಲ್ಟಿ ಪರಿಷ್ಕರಣೆ ಮಾಡಲು ಸಮ್ಮತಿ ಸೂಚಿಸಾಲಾಗಿದೆ.ಕಟ್ಟಡ ಕಲ್ಲು,ಮೈನಿಂಗ್ ಸ್ಟೋನ್ ರಾಜಧನ ಹೆಚ್ಚಳ ಮಾಡಿದ್ದು, ಪ್ರತಿಟನ್ ಗೆ 80 ರೂ ರಾಯಲ್ಟಿ ನಿಗದಿ ಮಾಡಲಾಗಿದೆ. ಇದರಿಂದ 311.55 ಕೋಟಿ ಹೆಚ್ಚುವರಿ ಸಂಗ್ರಹವಾಗಲಿದೆ.ಮೊದಲು ಮೆಟ್ರಿಕ್ ಟನ್ 70 ರೂ ಇತ್ತು ಈಗ 10 ರೂ ಪ್ರತಿ ಮೆಟ್ರಿಕ್ ಟನ್ ಗೆ ಹೆಚ್ಚಳ ಮಾಡಲಾಗಿದೆ.
ರಾಜಧನ ಪಾವತಿಸದೆ ಖನಿಜ ಸಾಗಾಟ, ದಂಡವನ್ನ ವಸೂಲಿ ಮಾಡಲು ನಿರ್ಧಾರ ಮಾಡಲಾಗಿದೆ. 6105 ರೂ ದಂಡವನ್ನ ವಿಧಿಸಲಾಗಿತ್ತು. ಕೆಲವು ಗುತ್ತಿಗೆಯಿಂದ ಬರಬೇಕಾದ ಬಾಕಿ ಇದ್ದು, ಹಲವು ವರ್ಷಗಳಿಂದ ದಂಡ ವಸೂಲಿಯಾಗಿಲ್ಲ. ಕಳೆದ ಆರೇಳು ವರ್ಷಗಳಿಂದ ವಸೂಲಿಯಾಗಿಲ್ಲ. ಹಾಗಾಗಿ ಒನ್ ಟೈಮ್ ಸೆಟಲ್ ಮೆಂಟ್ ಗೆ ಅವಕಾಶ ನೀಡಲಾಗಿದೆ. ಈ ಮೂಲಕ ದಂಡ ವಸೂಲಿಮಾಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.
ಕಳೆದ ಐದು ವರ್ಷಗಳಿಂದ ದಂಡ ಕಟ್ಟಿಲ್ಲ ಗಣಿಗಾರಿಕೆ ನಡೆಸುವವರು ದಂಡ ಕಟ್ಟಿಲ್ಲ.ಅದನ್ನ ವಸೂಲಿಮಾಡಲು ಈ ತೀರ್ಮಾನಿಸಲಾಗಿದೆ.ಡಿಜಿಟಲ್ ಮಾಡಿದ ಮೇಲೆ ಎನ್ ಕ್ರೋಚ್ ಸಾಧ್ಯವಾಗ್ತಿಲ್ಲ. ಒಟಿಎಸ್ ಮೂಲಕ ದಂಡವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. 1221 ಕೋಟಿ ರಾಯಲ್ಟಿ ಅಂತ ಪರಿಗಣಿಸಿದ್ದೇವೆ. 6105 ಕೋಟಿ ದಂಡ ಬಾಕಿ ಉಳಿದಿದೆ.ಒಟಿಎಸ್ ನಿಂದ ಇದರಲ್ಲಿ ಸ್ವಲ್ಪ ವ್ಯತ್ಯಾಸ ಆಗಬಹುದು.ಸರ್ಕಾರಕ್ಕೆ ಆದಾಯ ಬೇಕು ಅದನ್ನ ವಸೂಲಿಮಾಡಲು ಹೊರಟಿದ್ದೇವೆ ಎಂದು ತಿಳಿಸಿದರು.
ಇನ್ನೂ ಪ್ರಯೋಗಾಲಯಗಳಿಗೆ ಡಯಾಗ್ನಸ್ಟಿಕ್ ಕಿಟ್ ಖರೀದಿಗೆ ಅನುಮೋದನೆ ನೀಡಿದ್ದು, 19.70 ಕೋಟಿ ವೆಚ್ಚದಲ್ಲಿ ಖರೀದಿಗೆ ಒಪ್ಪಿಗೆ ಸೂಚಿಸಲಾಗಿದೆ.ಸರ್ಕಾರಿ ಉನ್ನತ ಶಿಕ್ಷಣ ಕೇಂದ್ರಗಳ ಉನ್ನತೀಕರಣ ಸುಮಾರು 2500 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ.ವಿಶ್ವಬ್ಯಾಂಕ್ ನೆರವಿನಡಿ ಕಾರ್ಯಕ್ರಮ ಯೋಜನೆ 1750 ಕೋಟಿ ವಿಶ್ವಬ್ಯಾಂಕ್ ನಡಿ ಸಾಲ ಪಡೆಯುವುದು ಒಟ್ಟು 2500 ಕೋಟಿ ಉನ್ನತ ಶಿಕ್ಷಣ ಬಲವರ್ಧನೆಗೆ ಕ್ರಮಕ್ಕೆ ನಿರ್ಧಾರಿಸಲಾಗಿದೆ.
ಕೆಕೆಆರ್ ಡಿಬಿ ಯಿಂದ ರಸ್ತೆಗಳ ಅಭಿವೃದ್ಧಿ, ಇಜೇರಿಯಿಂದ ಯಡ್ರಾಮಿ ವರೆಗೆ ರಸ್ತೆ ಅಭಿವೃದ್ಧಿ 25 ಕೋಟಿ ಅಂದಾಜು ನೀಡಿದೆ. ಜೇವರ್ಗಿ ತಾಲೂಕಿನಲ್ಲಿ ಬರುವ ಯಡ್ರಾಮಿ ವಸತಿ ಶಾಲೆಗಳಿಗೆ ಹಾಸಿಗೆ, ಮಂಚ, ಖರೀದಿ ಕೆಕೆಆರ್ ಡಿಬಿಯಿಂದ 42.66 ಕೋಟಿಯಲ್ಲಿ ಖರೀದಿ, ಮೆಟ್ರಿಕ್ ಪೂರ್ವ,ಮೆಟ್ರಿಕ್ ನಂತರ ಶಾಲೆಗಳಿಗೆ ಖರೀದಿ, ಜನನ ಮರಣ ನೊಂದಣಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಯಿತು. ಕೊರಳೂರು ಗ್ರಾಮದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ 97.27 ಕೋಟಿ ವೆಚ್ಚಕ್ಕೆ ಹೆಚ್ಚುವರಿ 54 ಕೋಟಿ ಸೇರ್ಪಡೆ ಮಾಡಲಾಗಿದೆ.ಹೊಸಕೋಟೆ ತಾಲೂಕಿನಲ್ಲಿ ಬರುವ ಕೊರಳೂರು ಇದಕ್ಕೆ ಇಂದಿನ ಸಚಿವ ಸಂಪುಟ ಸಭೆ ಸಮ್ಮತಿ ಸೂಚಿಸಿದೆ.
ಅಂತರ ಉದ್ಯಮ ಠೇವಣಿ ಇಡುವುದಕ್ಕೆ ಅವಕಾಶ. ಕರ್ಪೋರೇಷನ್ ಸಂಸ್ಥೆಗಳಿಗೆ ಠೇವಣಿ ಡಿಪಾಸಿಟ್ ಗೆ ಸಮ್ಮತಿ ಸೂಚಿಸಲಾಯಿತು.ಒಂದರಿಂದ ಮತ್ತೊಂದಕ್ಕೆ ಹಣ ಡಿಪಾಸಿಟ್ ಮಾಡುವುದು ಸರ್ಪಸ್ ಎಲ್ಲಿದೆ ಅಲ್ಲಿಂದ ಬೇರೆಯದಕ್ಕೆ ಠೇವಣಿ ಮಾಡಬಹುದು.ಠೇವಣಿದಾರರ ಹಿತಾಸಕ್ತಿ ಕಾಯ್ದೆಗೆ ತಿದ್ದುಪಡಿ ಇಂದಿನ ಸಂಪುಟ ಸಭೆಯಲ್ಲಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿದೆ.ಠೇವಣಿದಾರರ ಹಿತ ಕಾಪಾಡುವುದು ಇದರಲ್ಲಿ ಅವರ ರಕ್ಷಣೆಯ ಹೊಣೆಗಾರಿಕೆ ಇದರಲ್ಲಿ ಸೇರಿದೆ ಎಂದು ತಿಳಿಸಿದರು.
ಬಿಬಿಎಂಪಿ ವ್ಯಾಪ್ತಿಯ ಉಪಮುಖ್ಯ ರಸ್ತೆಗಳ ಅಭಿವೃದ್ಧಿ 694 ಕೋಟಿ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ, 1681 ಕಿ.ಮೀ ರಸ್ತೆಗಳ ಅಭಿವೃದ್ಧಿ, ಕಳೆದ ಕೆಲವು ದಿನಗಳ ಹಿಂದೆ ರಸ್ತೆ ಗುಂಡಿಗಳಿಂದ ಸರ್ಕಾರ ಟೀಕೆ ಗೊಳಗಾಗಿತ್ತು.ಹಾಗಾಗಿ ರಸ್ತೆ ಡಾಂಬರೀಕರಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ. ಸಂಪಂಗಿರಾಮನಗರದಲ್ಲಿ ಸಮಾಜಕಲ್ಯಾಣ ಭವನ ಬೆಂಗಳೂರಿನ ಸಂಪಂಗಿ ರಾಮನಗರ ಭವನ ನಿರ್ಮಾಣಕ್ಕೆ 40.50 ಕೋಟಿ ಅನುದಾನಕ್ಕೆ ಸಮ್ಮತಿ ಸೂಚಿಸಲಾಗಿದೆ. ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ, 43.95 ಕೋಟಿ ವೆಚ್ಚದಲ್ಲಿ ಒದಗಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿಸಿದರು.
ಸಮಾಜಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳು, ಆಹಾರ ಗುಣಮಟ್ಟ, ಔಷಧ ನಿಯಂತ್ರಣ ಇಲಾಖೆ ಮರ್ಜ್ ಎರಡು ಇಲಾಖೆಗಳನ್ನ ಒಂದು ಮಾಡಲು ಒಪ್ಪಿಗೆ ಸೂಚಿಸಲಾಗಿದೆ. ಮತ್ತಷ್ಟು ಗುಣಮಟ್ಟ ಕಾಯ್ದುಕೊಳ್ಳಲು ಈ ತೀರ್ಮಾನ ಯುಪಿ, ಬಿಹಾರ ಬೇರೆಡೆ ಇದೇ ರೀತಿ ಮರ್ಜ್ ಮಾಡಲಾಗಿದೆ. ಇದೀಗ ಮರ್ಜ್ ಮಾಡೋದ್ರಿಂದ ಒಳ್ಳೆಯ ರಿಸಲ್ಟ್ ಸಿಗಲಿದೆ. ಎಸ್ಸಿ,ಎಸ್ಟಿ ಸಮುದಾಯದ ಜನರಿಗೆ ವಿಶೇಷ ನಿಧಿ ಸ್ಥಾಪನೆ ಮಾರಕ ರೋಗಗಳಿಗೆ ವಿಶೇಷ ನಿಧಿ ಸ್ಥಾಪನೆ 3, 4 ಲಕ್ಷ ಖರ್ಚು ಬರುವಂತ ಚಿಕಿತ್ಸೆ 33 ವಿರಳ ದುಬಾರಿ ಕಾಯಿಲೆಗಳಿಗೆ ಚಿಕಿತ್ಸೆಗೆ ನೆರವು, ಎಸ್ಸಿಪಿ,ಟಿಎಸ್ಪಿ ಹಣವನ್ನೂಬಳಕೆ ಮಾಡಲಾಗುತ್ತದೆ.ಪ್ರಸ್ತುತ 47 ಕೋಟಿ ಫಂಡ್ ಮೀಸಲಿಡಲಾಗುತ್ತದೆ ಎಂದು ತಿಳಿಸಿದರು.