ಬೆಂಗಳೂರು : 2025 ಹೊಸ ವರ್ಷಕ್ಕೆ ಹೊಸ ಕಾರು ಹಾಗೂ ಬೈಕ್ ಖರೀದಿಸುವವರಿಗೆ ಇದೀಗ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದೆ. ಹೌದು ಹೊಸ ಕಾರು ಹಾಗೂ ಬೈಕ್ ಕೊಂಡುಕೊಳ್ಳುವವರಿಗೆ ಖರೀದಿಯ ನೋಂದಣಿ ಶುಲ್ಕ ತಲಾ 1000 ರೂ. ಹಾಗೂ 500 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಈಗಾಗಲೇ ಬೆಳಗಾವಿಯ ಅಧಿವೇಶನದಲ್ಲಿ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಳದ ಮಸೂದೆಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಹೌದು ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ, ಹೊಸ ಬೈಕ್ ಹಾಗೂ ಕಾರು ಖರೀದಿಸುವ ನೊಂದಣಿ ಶುಲ್ಕ ಹೆಚ್ಚಳ ಮಾಡುವ ಕುರಿತು ಮಸೂದೆ ಮಂಡನೆ ಮಾಡಲಾಗಿತ್ತು. ಹಾಗಾಗಿ ಫೆಬ್ರವರಿಯಿಂದ ಪರಿಷ್ಕೃತ ದರ ಜಾರಿ ಆಗಲಿದೆ.ದರ ಹೆಚ್ಚಳದಿಂದ ಬಂದ ಹಣವನ್ನು ಯೆಲ್ಲೋ ಬೋರ್ಡ್ ಚಾಲಕರ ಅಭಿವೃದ್ಧಿಗೆ ಬಳಕೆ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿದೆ.
ದರ ಹೆಚ್ಚಳ ಸಂಬಂದ ಈಗಾಗಲೇ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಸದ್ಯ ವಾಹನ್ – 4 ನಲ್ಲಿ ಅಪ್ಡೇಟ್ ಮಾಡಲಾಗುತ್ತಿದೆ. ಸಾರಿಗೆ ಇಲಾಖೆ ಸದ್ಯದಲ್ಲೇ ಅಂತಿಮ ಆದೇಶ ಹೊರಡಿಸಲಿದೆ. ಆದೇಶ ಹೊರಡಿಸಿದ ಬೆನ್ನಲ್ಲೇ, ರಾಜ್ಯದ ಎಲ್ಲಾ ಆರ್ಟಿಒಗಳಲ್ಲೂ ನೂತನ ರಿಜಿಸ್ಟ್ರೇಷನ್ ದರ ಜಾರಿ ಆಗಲಿದೆ.
ಸರ್ಕಾರದ ವಿರುದ್ಧ ಆಕ್ರೋಶ
ಹೊಸ ವರ್ಷದ ಆರಂಭದಲ್ಲಿ ಕೆಎಸ್ಆರ್ಟಿಸಿ ಟಿಕೆಟ್ ದರ 15% ಏರಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಇದೀಗ ಫೆಬ್ರವರಿ ತಿಂಗಳಿನಲ್ಲಿ ಹೊಸ ಬೈಕ್ ಹಾಗೂ ಕಾರು ಖರೀದಿಸುವ ವೇಳೆ, ನೋಂದಣಿ ಶುಲ್ಕ ದರ ಏರಿಕೆ ಮಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.ಚಾಲಕರ ಅಭಿವೃದ್ಧಿ ಮಾಡುತ್ತೇವೆ ಎಂದು ಹೊಸ ಕಾರು, ಬೈಕ್ ಖರೀದಿ ಮಾಡುವವರಿಗೆ ರಿಜಿಸ್ಟ್ರೇಷನ್ ಚಾರ್ಜ್ ಹೆಸರಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡಲು ಮುಂದಾಗಿದೆ. ಆದರೆ ಇದಕ್ಕೆ ಜನರು ಮಾತ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.