ಬೆಂಗಳೂರು : ಆಭರಣ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು, ಬಂಗಾರದ ಬೆಲೆ ಗಗನಕ್ಕೇರಿದ್ದು,ಕಳೆದ 4 ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4530 ರೂ. ಏರಿಕೆಯಾಗಿದೆ.
ಹೌದು, ಇಂದು ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂ ಒಂದಕ್ಕೆ 14,253 ರೂಪಾಯಿ ಇದ್ದು, ಇಂದು 38 ರೂ. ಏರಿಕೆ ಆಗಿದೆ. 10 ಗ್ರಾಂ ಶುದ್ಧ ಚಿನ್ನಕ್ಕೆ 1,42,530 ರೂ. ಇದೆ. 24 ಕ್ಯಾರೆಟ್ 10 ಗ್ರಾಂ ಬೆಲೆಯಲ್ಲಿ ಇಂದು 380 ರೂ. ಹೆಚ್ಚಳ ಆಗಿದೆ.
22 ಕ್ಯಾರೆಟ್ 1 ಗ್ರಾಂ ಬೆಲೆ 13,065 ರೂ.ಇದ್ದು, ಇಂದು 35 ರೂ ಹೆಚ್ಚಳ ಆಗಿದೆ. 10 ಗ್ರಾಂ ಬೆಲೆ 1,30,650 ರೂ. ಇದೆ. ಇಂದು 10 ಗ್ರಾಂ ನಲ್ಲಿ 350 ರೂ. ಏರಿಕೆ ಆಗಿದೆ. ಬೆಳ್ಳಿ ಬೆಲೆ ಇಂದು 5 ರೂ. ಏರಿಕೆಯಾಗಿದ್ದು, 275 ರೂ ಆಗಿದ್ದು, ಕೆಜಿಗೆ 2,75,000 ರೂ. ತಲುಪಿದೆ.








