ನವದೆಹಲಿ : ಹೇಮಾ ಮಾಲಿನಿ ವಿರುದ್ಧ ಅನುಚಿತ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಂಡಿದೆ. ಇಂದು ಸಂಜೆ 6 ಗಂಟೆಯಿಂದ ಮುಂದಿನ 48 ಗಂಟೆಗಳ ಕಾಲ ಸುರ್ಜೆವಾಲಾ ಅವರು ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನ ನಡೆಸುವುದನ್ನ ಆಯೋಗ ನಿಷೇಧಿಸಿದೆ. ಈ ಸಮಯದಲ್ಲಿ, ಅವರು ಸಾರ್ವಜನಿಕ ಸಭೆಗಳು, ರೋಡ್ ಶೋಗಳು, ಸಂದರ್ಶನಗಳು ಮತ್ತು ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನ ನೀಡಲು ಸಾಧ್ಯವಾಗುವುದಿಲ್ಲ.
ಈ ಹೇಳಿಕೆಯ ವಿವಾದದ ನಂತರ, ಸುರ್ಜೆವಾಲಾ ಸ್ಪಷ್ಟನೆ ನೀಡಿ, “ಹೇಮಾ ಮಾಲಿನಿ ಅವರನ್ನ ಅವಮಾನಿಸುವುದು ಅಥವಾ ನೋಯಿಸುವುದು ನನ್ನ ಉದ್ದೇಶವಲ್ಲ. ವೈರಲ್ ವೀಡಿಯೊದಲ್ಲಿ ನನ್ನ ಹೇಳಿಕೆಯನ್ನು ತಿರುಚಲಾಗಿದೆ” ಎಂದಿದ್ದರು.
BREAKING : ಛತ್ತೀಸ್ ಗಢದಲ್ಲಿ ಭದ್ರತಾ ಪಡೆ-ಮಾವೋವಾದಿಗಳ ನಡುವೆ ಎನ್ಕೌಂಟರ್ ; ಹಲವು ನಕ್ಸಲರ ಹತ್ಯೆ
BREAKING: ಛತ್ತೀಸ್ ಗಢದಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ 18 ಮಾವೋವಾದಿ ಬಲಿ