ನವದೆಹಲಿ : ಇರಾನ್ ಇಸ್ರೇಲ್ ಯುದ್ಧದ ನಡುವೆ ಇಂಡಿಗೋ ವಿಮಾನಗಳು ಇಂಧನದ ಸರ್ ಚಾರ್ಜ್ ಘೋಷಿಸಿರುವುದರಿಂದ ಇಂದಿನಿಂದ ವಿಮಾನ ಸಂಚಾರ ದುಬಾರಿಯಾಗಲಿದೆ. ಇಂದಿನಿಂದ ವಿಮಾನಗಳ ಮೇಲೆ 425 ರೂ.ನಿಂದ 2,300 ರೂ. ಇಂಧನ ಸರ್‌ಚಾರ್ಜ್ ವಿಧಿಸುವುದಾಗಿ ಇಂಡಿಗೋ ಘೋಷಿಸಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಇಂಡಿಗೋ ಇಂಧನ ಶುಲ್ಕವನ್ನು ಹೇರಲಿದೆ. ಇಂಡಿಗೋ ವಿಮಾನಗಳಲ್ಲಿನ ಎಲ್ಲಾ ಹೊಸ ಬುಕಿಂಗ್‌ಗಳಿಗೆ ಒಟ್ಟಾರೆ ಬೆಲೆಗಳು ಈ ಕೆಳಗಿನ ಹೆಚ್ಚುವರಿ ಇಂಧನ ಶುಲ್ಕವನ್ನು ಒಳಗೊಂಡಿರುತ್ತವೆ. ಭಾರತದೊಳಗೆ 425 ರೂ., ಮಧ್ಯಪ್ರಾಚ್ಯಕ್ಕೆ 900 ರೂ., ಆಗ್ನೇಯ ಏಷ್ಯಾ ಮತ್ತು ಚೀನಾಗೆ 1800 ರೂ., ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ 1800 ರೂ. ಮತ್ತು ಯುರೋಪ್ಗೆ 2,300 ರೂ. ಟಿಕೆಟ್ ದರ ಹೆಚ್ಚಳವಾಗಲಿದೆ.
ಈ ಬಗ್ಗೆ ಟ್ವೀಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಇಂಡಿಗೋ ಸಂಸ್ಥೆ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೌಗೋಳಿಕ ರಾಜಕೀಯ ಸಮಸ್ಯೆಗಳ ನಂತರ ಇಂಧನ ಬೆಲೆಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಇಂಡಿಗೋ ಹೇಳಿಕೆಯಲ್ಲಿ ತಿಳಿಸಿದೆ.
IndiGo introduces fuel charge on domestic and international routes, effective 14th March, 2026
Starting 14th March 2026, overall prices for all new bookings on IndiGo flights will include the following additional Fuel Charge, per sector- Within Domestic India Rs 425, Indian… pic.twitter.com/llXXdrtsYS
— ANI (@ANI) March 13, 2026








