ಬೆಂಗಳೂರು : ಬಿಜೆಪಿ ಎಂಎಲ್ಸಿ ಶಶಿಲ್ ನಮೋಶಿ ಅವರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರು ಪ್ರಕರಣವನ್ನು ರದ್ದು ಕೋರಿ ಅರ್ಜಿ ಸಲ್ಲಿಸಿದರು. ಅರ್ಜಿಯ ವಿಚಾರಣೆ ನಡೆಸಿದ ಹೈ ಕೋರ್ಟ್ ವಂಚನೆ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
2009 ಮತ್ತು 2018ರ ನಡುವೆ ಸೊಸೈಟಿ ಆಡಳಿತ ಮಂಡಳಿ ಸದಸ್ಯರಾಗಿದ್ದ ನಮೋಶಿ ಮತ್ತಿತರರು ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ಟೈಫಂಡ್ ಮೊತ್ತವನ್ನು ಪಾವತಿಸಿಲ್ಲ ಮತ್ತು ಉಳಿಕೆ ಸೀಟುಗಳ ಶುಲ್ಕವನ್ನು ಮರು ಪಾವತಿಸಿಲ್ಲ ಎಂದು 2024 ಆಗಸ್ಟ್ ನಲ್ಲಿ HKES ಸದಸ್ಯ ಪ್ರದೀಪ್ ದುಬೈಟಿ ದೂರು ನೀಡಿದ್ದರು.
ಈ ಅರ್ಜಿಯ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠವಂಚನೆ ಆರೋಪ ಸಂಬಂಧದ ಪ್ರಕರಣಗಳಲ್ಲಿ ನೋಂದ ವ್ಯಕ್ತಿ ಇಲ್ಲದೇ ಇತರರು 15 ವರ್ಷಗಳ ಬಳಿಕ ದೂರು ದಾಖಲಿಸುವುದಕ್ಕೆ ಅವಕಾಶವಿಲ್ಲ. ಆರೋಪ ಬೆಳಕಿಗೆ ಬಂದು 6 ವರ್ಷಗಳ ಬಳಿಕವೂ ಯಾವುದೇ ವಿದ್ಯಾರ್ಥಿ ತನಗೆ ಸ್ಟೈಫಂಡ್ ಬಂದಿಲ್ಲ ಎಂಬುದಾಗಿ ದೂರು ದಾಖಲಿಸಿಲ್ಲ ಎಂಬುದಾಗಿ ತಿಳಿಸಿದ್ದಾರೆ.
ದಾಖಲೆಗಳನ್ನು ಪರಿಶೀಲಿಸಿದಾಗ 2024ರ ಮಾರ್ಚ್ 31ರಂದು ಸೊಸೈಟಿಯ ಆಡಳಿತ ಮಂಡಳಿಯ ವಿರುದ್ಧ ಇದೇ ಆರೋಪದಲ್ಲಿ ದೂರು ದಾಖಲಾಗಿದೆ. ಅಲ್ಲದೆ, ನಮೋಶಿ ಮತ್ತಿಯರರು ದಾಖಲಿಸಿದ ದೂರಿನ ತನಿಖೆಗಾಗಿ ವಿಚಾರಣಾ ಸಮಿತಿ ರಚಿಸಲಾಗಿದೆ. ಹೀಗಾಗಿ, ಇದು ಸೇಡಿನ ಕೃತ್ಯವಾಗಿರಬಹುದು ಎಂಬ ವಾದವನ್ನು ತಳ್ಳಿಹಾಕಲಾಗುವುದಿಲ್ಲ ಎಂಬುದಾಗಿ ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.