ಬೆಂಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ಬೈದು ನಿಂದಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಹೈಕೋರ್ಟ್ ನಲ್ಲಿ ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ಈ ಒಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ಜಿ ಉಮಾ ಅವರು, ತನಿಖೆಗೆ ಸಹಕರಿಸಬೇಕು ಎಂದು ಷರತ್ತು ವಿಧಿಸಿ ಸಿಟಿ ರವಿ ಬಿಡುಗಡೆಗೆ ಆದೇಶ ಹೊರಡಿಸಿದರು.
ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರ ಪರವಾಗಿ ಸಂದೇಶ ಚೌಟ ಅವರು ವಾದ ಮಂಡಿಸಿದರು.ಅರೆಸ್ಟ್ ಅನ್ನೇ ನಾವು ಪ್ರಶ್ನಿಸಿದ್ದೇವೆ. ಬಂಧನವೇ ಕಾನೂನು ಬಾಹಿರವಾದರೆ ತಕ್ಷಣ ಬಿಡುಗಡೆ ಮಾಡಬೇಕು. ಸೆಕ್ಷನ್ 75 ಮತ್ತು 79 ರ ಅಡಿ ಕೇಸ್ ದಾಖಲಾಗಿದೆ. ಆರೋಪಿ ಹಾಗೂ ದೂದಾರ ಇಬ್ಬರು ಶಾಸಕರು ಎಂದು ಸಂದೇಶ್ ಚೌಟ ವಾದಿಸಿದರು.
ವಾದ ಅಂತ್ಯವಾದ ಬಳಿಕ ಹೈ ಕೋರ್ಟ್ ನ ನ್ಯಾಯಮೂರ್ತಿ ಎಂ. ಜೆ ಉಮಾ ಅವರು ಆದೇಶವನ್ನು ಪ್ರಕಟಿಸುವ ವೇಳೆ, ಆರೋಪಿ ದೂರುದಾರ ಇಬ್ಬರು ಶಾಸಕರು ಆರೋಪಿ…. ಎಂದು ಸಂಬೋಧಿಸಿದ್ದಾರೆ. ಫಿರ್ಯಾದಿಯನ್ನು ಅಸಂವಿಧಾನದ ಪದದಿಂದ ಸಂಬೋಧಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಹಾಗಾಗಿ ತಕ್ಷಣ ಆರೋಪಿ ಸಿಟಿ ರವಿಯನ್ನು ಬಂಧಿಸಲಾಗಿದೆ.
ಗರಿಷ್ಠ ಶಿಕ್ಷೆ 1 ವರ್ಷ ಮತ್ತು 3 ವರ್ಷ ಮಾತ್ರವಿದೆ.ಅಥವಾ ದಂಡ ವಿಧಿಸಲು ಅವಕಾಶವಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ಇದ್ದರೆ 41 A ಅಡಿ ನೋಟಿಸ್ ನೀಡಬೇಕು 6ನೇ ಸುಕುಮಾರ್ ಕೇಸ್ನಲ್ಲಿ ಸುಪ್ರೀಂ ಕೋರ್ಟ್ ಈ ಬಗ್ಗೆ ತೀರ್ಪು ನೀಡಿದೆ. ನೋಟಿಸ್ ನೀಡಿಲ್ಲವೆಂಬುದನ್ನು ಎಸ್ ಪಿ ಪಿ ನಿರಾಕರಿಸಿದ್ದಾರೆ. ಆದರೆ ಇದಕ್ಕೆ ಪೂರಕವಾಗಿ ಯಾವುದೇ ದಾಖಲೆಯನ್ನು ಸಲ್ಲಿಸಿಲ್ಲ. ಬಂಧನವೇ ಕಾನೂನು ಬಾಹಿರವೆಂದು ಘೋಷಿಸಲು ಮನವಿ ಮಾಡಿದ್ದಾರೆ. ಹೀಗಾಗಿ ತಕ್ಷಣ ರಿಲೀಸ್ ಮಾಡುವಂತೆ ಮನವಿ ಮಾಡಿದ್ದಾರೆ.
ಆರೋಪಿ ಈಗಾಗಲೇ ಜಾಮೀನು ಅರ್ಜಿ ಸಲ್ಲಿಸಿದ್ದಾನೆ.ಹೀಗಾಗಿ ಬಿಡುಗಡೆಗೆ ಆದೇಶಿಸಬಾರದೆಂದು ಎಸ್ ಪಿ ಪಿ ಬೆಳ್ಳಿಯಪ್ಪ ವಾದಿಸಿದ್ದಾರೆ. ಆರೋಪಿ ಮತ್ತು ಫಿರ್ಯಾದಿ ಇಬ್ಬರೂ ಕೂಡ ಶಾಸಕರಾಗಿದ್ದಾರೆ. ಪರಿಷತ್ ನಲ್ಲಿ ಈ ರೀತಿ ಘಟನೆ ನಡೆದಿರುವುದು ದುರದೃಷ್ಟಕರ.ಈ ವೇಳೆ ಸಂದೇಶ್ ಚೌಟ, ಆರೋಪಗಳಿಗೆ 7 ವರ್ಷಕ್ಕಿಂತ ಕಡಿಮೆ ಶಿಕ್ಷ ಇದೆ. 41A ಅಡಿ ನೋಟಿಸ್ ನೀಡಬೇಕಿತ್ತು. ಪೋಲಿಸ್ ಬಂಧನಕ್ಕೆ ಕಾರಣಗಳನ್ನು ನೀಡಬೇಕಿತ್ತು, ಆದರೆ ಇದನ್ನು ನೀಡಿರುವ ಬಗ್ಗೆ ದಾಖಲೆಗಳನ್ನು ಒದಗಿಸಿಲ್ಲ ಎಂದು ಪ್ರತಿವಾದಿಸಿದರು.
ಪೊಲೀಸರು ಹಲ್ಲೆ ನಡೆಸಿದ್ದರಿಂದ ಗಾಯಗಳಾಗಿವೆ ಎಂದು ಸಿಟಿ ರವಿ ವಕೀಲರು ಹೀಗೆ ವಾದಿಸಿದ್ದಾರೆ. ಚಿಕಿತ್ಸೆಯ ವಿವರವನ್ನು ವೈದ್ಯಾಧಿಕಾರಿ ಸರಿಯಾಗಿ ನಮೂದಿಸಿಲ್ಲ. ಆದರೆ ಸ್ಕ್ಯಾನಿಂಗ್ ಮಾಡಿಸಿರುವುದಾಗಿ ವರದಿ ಇದೆ ಏನನ್ನು ರೆಕಾರ್ಡ್ ಮಾಡಿಲ್ಲವೆಂದು ಸಭಾಪತಿ ಹೇಳಿಕೆ ನೀಡಿದ್ದಾರೆ.ಸಿಟಿ ರವಿಯನ್ನು ಬಂಧಿಸುವಾಗ ಹಲ್ಲಿ ನಡೆಸುವ ಅಗತ್ಯವಿರಲಿಲ್ಲ. ಕಾನೂನು ಕ್ರಮ ಪಾಲಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ಸಿಟಿ ರವಿ ಬಿಡುಗಡೆಗೆ ಹೈಕೋರ್ಟ್ ಆದೇಶ ಹೊರಡಿಸಿತು.