ಬೆಂಗಳೂರು : ಸಚಿವ ಚೆಲುವರಾಯಸ್ವಾಮಿ ವಿರುದ್ಧ ಭೂಕಬಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ 2 ಕೇಸ್ ದಾಖಲಾಗಿತ್ತು. ಈ ಕೇಸ್ ಗಳನ್ನು ರದ್ದು ಕೋರಿ ಸಚಿವ ಚೆಲುವರಾಯಸ್ವಾಮಿ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಪೀಠವು ಭೂ ಕಬಳಿಕೆ ನಿಷೇಧ ಕೋರ್ಟ್ ನ 2 ಕೇಸ್ ಗಳನ್ನು ರದ್ದುಗೊಳಿಸಿ ಆದೇಶ ನೀಡಿದೆ. ಈ ಹಿನ್ನೆಲೆ ಸಚಿವ ಚೆಲುವರಾಯ ಸ್ವಾಮಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಬೆಂಗಳೂರಿನ ದಾಸನಪುರ ಹೋಬಳಿ ಮಾಕಳಿಯ 3 ಎಕರೆ 13 ಗುಂಟೆ ಜಮೀನು ಕಬಳಿಕೆ ಸಂಬಂಧ ಎರಡು ಕೇಸ್ ದಾಖಲಾಗಿತ್ತು. ಈ ಕೇಸ್ ಗಳನ್ನು ರದ್ದು ಮಾಡುವಂತೆ ಚೆಲುವರಾಯಸ್ವಾಮಿ ಅರ್ಜಿ ಸಲ್ಲಿಸಿದ್ದರು ಜಮೀನಿಗೆ ಸಂಬಂಧಿಸಿದಂತೆ 1923 ರಿಂದಲೇ ಕ್ರಯಪತ್ರವಾಗಿದ್ದು, ಶತಮಾನದ ಹಳೆಯ ದಾಖಲೆ ಇರುವ ಜಮೀನು ಎಂದು ಇದೀಗ 2 ಕೇಸ್ ರದ್ದುಗೊಳಿಸಲಾಗಿದೆ. ನ್ಯಾ ಕೃಷ್ಣ ಎಸ್ ದೀಕ್ಷಿತ್ ಹಾಗೂ ಜೀ ಬಸವರಾಜ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.