ನವದೆಹಲಿ : ಮಲಯಾಳಂ ನಟ ಸಿದ್ದೀಕ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಿದ್ದಿಕ್ ಗೆ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಹೌದು ಮಲಯಾಳಂ ನಟ ಸಿದ್ದಿಕ್ಗೆ ಸುಪ್ರೀಂ ಕೋರ್ಟ್ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ತಿರುವನಂತಪುರಂ ನಲ್ಲಿ ಅತ್ಯಾಚಾರ ಎಸೆಗಿದ್ದ ಆರೋಪದ ಅಡಿ ಪ್ರಕರಣ ದಾಖಲಾಗಿತ್ತು. ಮಹಿಳೆ ಒಬ್ಬರು ನಟ ಸಿದ್ದಿಕ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು. ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸಿದ್ಧಿಕ್ ಅಭಿನಯಿಸಿದ್ದಾರೆ. ಅಲ್ಲದೆ ನ್ಯಾ. ಹೇಮಾ ಸಮಿತಿ ವರದಿಯಲ್ಲೂ ಅತ್ಯಾಚಾರದ ಆರೋಪವಿತ್ತು.