ಬೆಂಗಳೂರು : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಆಗುತ್ತಿದ್ದು ಅದಲ್ಲದೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ. ಕಾಂಗ್ರೆಸ್ ಮಾಜಿ ಸಚಿವ, ಹಾನಗಲ್ ಕ್ಷೇತ್ರದ ಮಾಜಿ ಶಾಸಕ ಮನೋಹರ್ ತಹಸೀಲ್ದಾರ್‌ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.
ನಿಮಗೆ ಬೆಂಗಳೂರಲ್ಲಿ ‘ಕೆರೆ ರಕ್ಷಣೆ’ ಮಾಡೋ ಉದ್ದೇಶ ಇದ್ಯಾ.? ಇಲ್ಲಿದೆ ಸುವರ್ಣಾವಕಾಶ
ಬಿಜೆಪಿ ರಾಜ್ಯ ಕಚೇರಿಯಲ್ಲಿ ಶನಿವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ತಹಸೀಲ್ದಾರ್‌ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು.ಈ ವೇಳೆ ಮಾತನಾಡಿದ ಬಿ. ವೈ.ವಿಜಯೇಂದ್ರ, ಹಿಂದುಳಿದ ವರ್ಗದ ಧುರೀಣರು ಬಿಜೆಪಿ ಸೇರಿದ್ದರಿಂದ ಹಾವೇರಿ ಜಿಲ್ಲೆಗೆ ಒಂದು ದೊಡ್ಡ ಶಕ್ತಿ ಲಭಿಸಿದೆ.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್: ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ!
ಇದು ಬಹಳ ಸಂತೋಷ ತಂದುಕೊಟ್ಟಿದೆ. ಕೇಂದ್ರ ದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರ ಬೇಕು. ನರೇಂದ್ರ ಮೋದಿ ಅವರು ಮಗದೊಮ್ಮೆ ಪ್ರಧಾನಿ ಆಗಬೇಕೆಂಬ ಇಚ್ಛೆ ದೇಶ- ರಾಜ್ಯದ ಜನರಲ್ಲಿದೆ ಎಂದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮನೋಹರ್ ತಹಸೀಲ್ದಾರ್ ಸೇರ್ಪಡೆಯಿಂದ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಬಿಜೆ ಪಿಗೆ ದೊಡ್ಡ ಶಕ್ತಿ ಲಭಿಸಿದೆ ಎಂದು ತಿಳಿಸಿದರು.
BIG NEWS : ಇನ್ನೂ ’10 ವರ್ಷ’ ಸಿದ್ದರಾಮಯ್ಯ ಸಿಎಂ ಆಗಿರಲಿ: ಭಾರಿ ಸಂಚಲನ ಸೃಷ್ಟಿಸಿದ ಶಾಸಕ ರಾಯರಡ್ಡಿ ಹೇಳಿಕೆ
ಮನೋಹರ್‌ತಹಸೀಲ್ದಾರ್ ಮಾತನಾಡಿ, ತಾವು ಬಿಜೆಪಿ ಸೇರ್ಪಡೆಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯ ಕಾರಣಕರ್ತರು. ಊಟ ಮಾಡಿ ಎಲೆಯನ್ನು ಬಿಸಾಡಿದ ರೀತಿ ಕಾಂಗ್ರೆಸ್‌ನಲ್ಲಿ ನನಗಾದ ಅನ್ಯಾಯವನ್ನು ಗ್ರಹಿಸಿ ಬಿಜೆಪಿಗೆ ಆಹ್ವಾನ ನೀಡಿದ್ದರು. ಕಾಂಗ್ರೆಸ್ ಪಕ್ಷದವರು ನನ್ನ ಮಗನಿಗೂ ಅನ್ಯಾಯ ಮಾಡಿದರು ಎಂದು ಕಿಡಿಕಾರಿದರು. ಕಾಂಗ್ರೆಸ್‌ನಲ್ಲಿ ನಿರಂತರ 45 ವರ್ಷದ ಸೇವೆಗೆ ಬೆಲೆ ಸಿಗದಿದ್ದರಿಂದ ಬೇಸರವಾಗಿತ್ತು. ಗೌರವಯುತವಾಗಿ ಇರಲು ಅವಕಾಶ ಕೋರಿದ್ದೇನೆ. ಹಾನಗಲ್ ತಾಲೂಕು ಬಿಜೆಪಿ ಮುಖಂಡರ ಒಪ್ಪಿಗೆ ಪಡೆದು ಪಕ್ಷಕ್ಕೆ ಸೇರಿದ್ದೇನೆ ಎಂದರು.