ಬೀದರ್ : ನಿನ್ನೆ ನಗರದ ಅಲಿಯಾಬಾದ ರಿಂಗ್ ರಸ್ತೆಯಲ್ಲಿರುವ ದಾಬಾವೊಂದರಲ್ಲಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ರಿಯಲ್ ಎಸ್ಟೇಟ್ BREAKING : ಬೀದರ್ ನಲ್ಲಿ ಉದ್ಯಮಿಯನ್ನು ಮಚ್ಚಿನಿಂದ ಹತ್ಯೆಗೈದ ಪ್ರಕರಣ : ಇಬ್ಬರು ಆರೋಪಿಗಳು ಅರೆಸ್ಟ್ಉದ್ಯಮಿಯೊಬ್ಬನ ಭೀಕರ ಹತ್ಯೆಯಾಗಿದೆ. ಇದೀಗ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ವೈಜ್ಯನಾಥನನ್ನು ಕೊಲೆ ಮಾಡಿದ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಾವದಗಿರಿ ಗ್ರಾಮದ ಜಾನ್ ಬೆಂಡಿ ಮತ್ತು ಸ್ನೇಹಿತ ಉಮೇಶ್ ನ ಬಂಧನವಾಗಿದೆ. ಬೀದರ್ ನ ಅಲಿಯಾಬಾದ್ ರಿಂಗ್ ರೋಡ್ ಬಳಿ ಈ ಒಂದು ಕೊಲೆ ನಡೆದಿತ್ತು. ನಿನ್ನೆ ವೈಜ್ಯನಾಥ್ ದತ್ತಾತ್ರಿ (49) ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು.
ಬೀದರ್ ತಾಲ್ಲೂಕಿನ ಹೊನ್ನೀಕೇರಿ ನಿವಾಸಿ ಆಗಿರುವ ಜಾನ್ ಬೆಂಡಿ ಮತ್ತು ಉಮೇಶ್ ಮಚ್ಚಿನಿಂದ ಕೊಚ್ಚಿ ಪರಾರಿ ಆಗಿದ್ದು, ಇದೀಗ ಅರೆಸ್ಟ್ ಆಗಿದ್ದಾರೆ. ಡಾಬಾದಲ್ಲಿ ಕುಳಿತುಕೊಂಡಿದ್ದ ವೈದ್ಯನಾಥ್ ಮೇಲೆ ಅಟ್ಯಾಕ್ ಮಾಡಿದ್ದರು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿ ಜಾನ್ ಬೆಂಡಿ ಮತ್ತು ಉಮೇಶ್ ಕೊಲೆಗೈದಿದ್ದರು. ಬೀದರ್ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು.
ಘಟನೆ ಹಿನ್ನೆಲೆ?
ಗ್ರಾಮದಲ್ಲಿ ಅಭಿವೃದ್ದಿಪರ ಕೆಲಸಗಳನ್ನು ಮಾಡುತ್ತಿದ್ದ ವೈಜಿನಾಥ್ ದತ್ತಾತ್ರಿ. ನೆನ್ನೆ ಮಧ್ಯಾಹ್ನ ಸ್ನೇಹಿತರೊಂದಿಗೆ ಬೀದರ್ ನಗರದ ಸಮೀಪದ ದಾಬಾಕ್ಕೆ ಊಟಕ್ಕೆಂದು ತೆರಳಿದ್ದ. ಊಟ ಮುಗಿಸಿ ಕೈತೊಳೆಯಲೆಂದು ಹೊರಗಡೆ ಹೋದ ವೈಜಿನಾಥ್‌ಗೆ ಊಟ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ದುಷ್ಕರ್ಮಿಗಳು ಆತನ ಮೇಲೆರಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.
ಚಾಕುವಿನಿಂದ ಇರಿಯಲು ಮುಂದಾಗುತ್ತಿದ್ದಂತೆ ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ. ಆದರೂ ಬೆನ್ನು ಬಿಡದ ದುಷ್ಕರ್ಮಿಗಳು ದಾಬಾದಿಂದ 200 ಮೀಟರ್ ದೂರದಲ್ಲಿ ಅಟ್ಟಿಸಿಕೊಂಡು ಹೋಗಿದ್ದಾರೆ. ಎದೆ, ಕತ್ತು ಹಾಗೂ ತಲೆಗೆ ಬಲವಾಗಿ ಹೊಡೆದಿದ್ದಾರೆ. ಬಳಿಕ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದಿದ್ದಾರೆ.