ಬೀದರ್ : ಬೀದರ್ ನಲ್ಲಿ ಭೀಕರವಾದ ಹತ್ಯೆ ನಡೆದಿದ್ದು, ತಲೆಯ ಮೇಲೆ ಕಲ್ಲು ಎತ್ತಿಹಾಕಿ ಯುವಕನೊರ್ವನನ್ನು ಬರ್ಬರವಾಗಿ ಕೊಂದಿರುವ ಘಟನೆ ಮಂಗಳವಾರ ರಾತ್ರಿ ಕಮಲನಗರ ತಾಲ್ಲೂಕಿನ ಚಾಂಡೇಶ್ವರ್ ಗ್ರಾಮದ ಬಳಿ ನಡೆದಿದೆ.
ಕೊಲೆಯಾದ ಯುವಕನನ್ನು ಗಂಗಶೆಟ್ಟಿ (26) ಎಂದು ತಿಳಿದುಬಂದಿದೆ.ಮಂಗಳವಾರ ರಾತ್ರಿ ಚಾಂಡೇಶ್ವರ್ ಗ್ರಾಮದ ಹೊರವಲಯದಲ್ಲಿ ಗಂಗಶೆಟ್ಟಿ ಎಂಬ ಯುವಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ.
ಯಾವ ಕಾರಣಕ್ಕೆ ಗಂಗಶೆಟ್ಟಿಯನ್ನು ಕೊಲೆ ಮಾಡಲಾಯಿತು ಎಂಬುವುದು ಇನ್ನು ತಿಳಿದು ಬಂದಿಲ್ಲ ಎನ್ನಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಕಮಲನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.