ನವದೆಹಲಿ : ಡಿಜಿಟಲ್ ಪಾವತಿ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಪೇಟಿಎಂನ ಸಿಒಒ ಮತ್ತು ಅಧ್ಯಕ್ಷ ಭವೇಶ್ ಗುಪ್ತಾ ಅವರು ಮೇ 4ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ಸ್ಟಾಕ್ ರೆಗ್ಯುಲೇಟರಿ ಫೈಲಿಂಗ್ ಮೂಲಕ ತಿಳಿಸಿದೆ.
ತಮ್ಮ ರಾಜೀನಾಮೆ ಪತ್ರವು ಮೇ 31ರ ವ್ಯವಹಾರದ ಸಮಯಕ್ಕೆ ಕೊನೆಗೊಳ್ಳುತ್ತದೆ ಎಂದು ಗುಪ್ತಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. “ಅವರ ರಾಜೀನಾಮೆಯನ್ನ ಕಂಪನಿ ಅಂಗೀಕರಿಸಿದೆ ಮತ್ತು ಮೇ 31, 2024 ರಂದು ವ್ಯವಹಾರದ ಸಮಯ ಮುಗಿದ ನಂತರ ಅವರನ್ನ ಕಂಪನಿಯ ಸೇವೆಗಳಿಂದ ಮುಕ್ತಗೊಳಿಸಲಾಗುವುದು” ಎಂದು ಸಂಸ್ಥೆ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
2024 ರ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದ ಫಲಿತಾಂಶಗಳನ್ನ ಪ್ರಕಟಿಸಲು ಸಂಸ್ಥೆ ಸಜ್ಜಾಗುವ ಕೆಲವು ದಿನಗಳ ಮೊದಲು ಇತ್ತೀಚಿನ ಸುದ್ದಿ ಬಂದಿದೆ. ತನ್ನ ಸಹವರ್ತಿ ಸಂಸ್ಥೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (PPBL) ಮೇಲೆ ನಿಯಂತ್ರಕರ ನಿರ್ಬಂಧಗಳ ನಂತರ ತ್ರೈಮಾಸಿಕ ಫಲಿತಾಂಶಗಳು ಉತ್ತಮವಾಗಿರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.